ಸ್ಪೂರ್ತಿ

ಈ ಚಿತ್ರದಲ್ಲಿರುವ ಪೋಲಿಸ್ ಪೇದೆ ಏನು ಮಾಡುತ್ತಿದ್ದಾನೆ ಗೊತ್ತಾ..?ತಿಳಿಯಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ ನೋಡಿ…

By admin

January 05, 2018

ಇತ್ತೀಚೆಗಷ್ಟೇ ಮುಂಬೈನ ಕಮಲಾ ಮಿಲ್ಸ್’ನಲ್ಲಿ ಅಗ್ನಿ ದುರಂತ ನಡೆದಿದ್ದು, ಸರಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡು, ತುಂಬಾ ಚರ್ಚೆಗೆ ಕಾರಣವಾಗಿದೆ.ಇದೇ ಸಮಯದಲ್ಲಿ ಒಬ್ಬ ಪೋಲೀಸ್ ಪೇದೆ ರಿಯಲ್ ಹಿರೋನಂತೆ ಮಾಡಿರುವ ಸಾಹಸ, ನಿಜಕ್ಕೂ ಮೈ ಜುಮ್ಮೆನಿಸುವನ್ತಾಗಿದ್ದು,ಅದರಲ್ಲಿನ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.

ರಿಯಲ್ ಹಿರೋ ಈ ಪೋಲಿಸ್ ಪೇದೆ :-

ದುರಂತ ನಡೆದಾಗ ಸ್ಥಳದಲ್ಲಿದ್ದ, ಶಿವಾಜಿ ಪಾಂಡೆ ಎಂಬ ಪೊಲೀಸ್ ಪೇದೆ ತನ್ನ ಸಮಯಪ್ರಜ್ಞೆಯಿಂದ 8 ಮಂದಿ ಪ್ರಾಣವನ್ನು ಉಳಿಸಿದ್ದಾರೆ.ಹಾಗೂ ಮಹಿಳೆಯೊಬ್ಬರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದ್ದು,ಇವರು ರಿಯಲ್ ಹಿರೋ ಎನಿಸಿದ್ದಾರೆ.

ಅವರ ಸಮಯಪ್ರಜ್ಞೆ ಮತ್ತು  ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಮುಂಬೈ ಪೊಲೀಸ್ ಕಮೀಷನರ್ ಸನ್ಮಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಕಮೀಷನರ್ ದತ್ತಾತ್ರೇಯ ಪಡ್ಸಲ್ಗಿಕರ್, ಮೇಯರ್ ವಿಶ್ವನಾಥ್ ಮಹದೇಶ್ವರ ಹಾಜರಾಗಿ ಶಿವಾಜಿಯನ್ನು ಸನ್ಮಾನಿಸಿ ಅವರ ಧೈರ್ಯ, ಸಾಹಸವನ್ನು ಕೊಂಡಾಡಿದ್ದಾರೆ.

ರಿಯಲ್ ಸಿಂಗಂ ಶಿವಾಜಿ ಹೇಳಿದ್ದೇನು..?

ಮಧ್ಯರಾತ್ರಿ ಸುಮಾರು 12.30ರ ಸಮಯದಲ್ಲಿ ವೈರ್‌ಲೆಸ್ ಮೂಲಕ ನಮಗೆ ಮಾಹಿತಿ ಬಂತು. ತಕ್ಷಣ ನಮ್ಮ ಟೀಮ್’ನ ಜೊತೆ ನಾವು ದುರಂತ ನಡೆದ ಸ್ಥಳಕ್ಕೆ ಹೋದೆವು. ಆಗಾಗಲೇ ಅಲ್ಲಿ ತುಂಬಾ ಹೊಗೆ, ಬೆಂಕಿ ಹಬ್ಬಿತ್ತು.

ಕೂಡಲೆ ರಕ್ಷಣೆಗೆ ಮುಂದಾದ ನಾವು, ಒಳಗೆ ಸಿಕ್ಕಿಬಿದ್ದಿದ್ದವರನ್ನು ಸಾಧ್ಯವಾದಷ್ಟು ಹೊರಗೆ ತಂದೆವು. ಒಂದೇ ಒಂದು ದಾರಿ ಇದ್ದ ಕಾರಣ ಬಹಳಷ್ಟು ಮಂದಿ ರೆಸ್ಟ್ ರೂಮ್‌ನಲ್ಲಿ ಹೋಗಿ ರಕ್ಷಣೆ ಪಡೆದಿದ್ದರು. ಹಾಗಾಗಿ ಹೆಚ್ಚಿನ ಮಂದಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಉಸಿರಾಡಲು ಆಗದೆ ಉಳಿದವರೆಲ್ಲಾ ಅಲ್ಲೇ ಮೃತಪಟ್ಟಿದ್ದರು. ಆ 14 ಮಂದಿಯನ್ನೂ ರಕ್ಷಿಸಬೇಕಾಗಿತ್ತು’ ಎಂದು ತೀವ್ರ ಭಾವೋದ್ರೇಕದಿಂದ ಹೇಳಿದ್ದಾರೆ ಶಿವಾಜಿ.

ನೀವು ಮತ್ಸ್ಯ ಕನ್ಯೆ ನೋಡಿಲ್ಲ ಅಂದ್ರೆ ಈ ವಿಡಿಯೋ ನೋಡಿ:-