ಇಂಡೊನೇಶಿಯದ ಸಣ್ಣ ಗ್ರಾಮ ಸೆಮರೆಂಗ್ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ನ್ಯೂಸ್ ಆಗಿದೆ. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿಯಲು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮವು ಪ್ರವಾಸಿಗರನ್ನು ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.
ಕಾರಣವೇನು ಗೊತ್ತಾ?
ಇದಕ್ಕೆ ಕಾರಣ ಈ ಊರಿನಲ್ಲಿರುವ ಮನೆಗಳು. ಎಲ್ಲವನ್ನೂ ಬೇರೆ ಬೇರೆ ಬಣ್ಣಗಳಿಂದ ಅಲಂಕೃತಗೊಳಿಸಲಾಗಿದೆ. ಆದ್ದರಿಂದ ಈ ಗ್ರಾಮವನ್ನು ಕಾಮನಬಿಲ್ಲು (ರೇನ್‌ಬೊ) ಗ್ರಾಮ ಎಂದು ಕೂಡಾ ಕರೆಯಲಾಗುತ್ತಿದೆ. ಬಣ್ಣ ಬಣ್ಣದ ರಂಗು ರಂಗಿನ ಮನೆಗಳು ಈಗ ಚರ್ಚೆಯ ವಿಷಯವಾಗಿದೆ.
ಸೆಮರೇಂಗ್‌ಗ್ರಾಮದ ವೊನೊಸಾರಿ ಸಮುದಾಯ ತಮ್ಮ ವರಮಾನ ಹೆಚ್ಚಿಸಲಿಕ್ಕಾಗಿ ಮತ್ತು ಜೀವನೋಪಾಯಕ್ಕಾಗಿ ಈ ಉಪಾಯವನ್ನುಹುಡುಕಿದೆ. ಗ್ರಾಮದ ಎಲ್ಲ ಮನೆಗಳ ಗೋಡೆ ಮತ್ತು ಮುಂತಾದುವುಗಳಿಗೆ ಬಣ್ಣಹಚ್ಚಲು ಒಂದು ತಿಂಗಳು ಸಾಕಾಯಿತು. ಆದರೆ ಈ ಮನೆಗಳ ವರ್ಣಾವತಾರವನ್ನುನೋಡಿ ಯಾರಾದರೂ ಅಚ್ಚರಿ ಪಡಬಹುದು .
ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್ ಆಗುತ್ತಿದೆ.ವಿದೇಶಿಪ್ರವಾಸಿಗರು ಈ ಮನೆಗಳನ್ನು ನೋಡಲು ತಂಡೋಪ ತಂಡವಾಗಿ ಬರುತ್ತಿದ್ದಾರೆ.
ಈ ಮನೆಗಳ ಅಲಂಕಾರಕ್ಕೆ ಸರಕಾರ ಮತ್ತುಇತರ ಕಂಪೆನಿಗಳು ಕೂಡಾ ಸಹಾಯ ಮಾಡಿವೆ. ಗ್ರಾಮವನ್ನು ಬದಲಾಯಿಸಿದ್ದರ ಉದ್ದೇಶ ಜನರ ಆದಾಯವನ್ನು ಹೆಚ್ಚಿಸುವುದು. ಯಾಕೆಂದರೆ ಈ ರೀತಿಯ ಹೊಸ ಮನೆಗಳನ್ನು ನೋಡಲು ವಿದೇಶಿ ಪ್ರವಾಸಿಗರು ಬರುತ್ತಾರೆ.
ಟೂರಿಸ್ಟ್‌ಗಳು ಈ ಮನೆಗಳ ಫೋಟೊ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದು ತುಂಬಾ ವೈರಲ್ ಅಗಿವೆ.