ಮನಿ ಪ್ಲಾಂಟ್ ಅನ್ನೊದು ಸಾಮಾನ್ಯವಾಗಿ ಮನೆಯಲ್ಲಿಡೋ ಒಂದು ಗಿಡ. ಇದನ್ನು ಬೆಳ್ಸೋದು ಅಷ್ಟೇನ್ ಕಷ್ಟ ಅಲ್ಲ ಬಿಡಿ. ದಿನನಿತ್ಯ ಅದರ ಕಡೇ ಸ್ವಲ್ಪ ಕಣ್ಣಾಯ್ಸಿ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರ ಮತ್ತು ಚೀನಾದ ಪೆಂಗ್ ಶು ಪ್ರಕಾರ ಮನಿ ಪ್ಲಾಂಟ್ನಿಂದ ಮನೆಯಲ್ಲಿ ಅದ್ರಷ್ಟ ತಾನಾಗೇ ತಾನೇ ಬದ್ಲಾಗತ್ತೆ.
ಹಾಗಂತ ಇದನ್ನು ಎಲ್ಲೆಂದ್ರಲ್ಲಿ ಇಟ್ರೆ ಅದ್ರಷ್ಟ ಬರಲ್ಲ . ಅದನ್ನು ಸರಿಯಾದ ಜಾಗದಲ್ಲಿ ಇಟ್ಟಾಗ ಮಾತ್ರ ನಿಮ್ ಅದ್ರಷ್ಟ ಬದ್ಲಾಗತ್ತೆ. ವಾಸ್ತು ಶಾಸ್ತ್ರದ ನಂಬಿಕೆಯಂತೆ ಈ ಬ್ರಹ್ಮಾಂಡದಲ್ಲಿ ಪಾಸಿಟಿವ್ ಎನರ್ಜಿಗಳು ಅಗಾಧವಾಗಿರತ್ತೆ. ಮನಿ ಪ್ಲಾಂಟ್ನ್ ಸರಿಯಾದ ಜಾಗದಲ್ಲಿ ಇಟ್ಟಾಗ ಅದು ಎನರ್ಜಿಯನ್ನ ಸೆಳ್ಕೊಂಡ್ ಬಿಡತ್ತೆ. ಹಾರ್ಟ್ ಶೇಪಲ್ಲಿರೋ ಎಲೆ ಗೆಳೆತನವನ್ನ ಶಾಶ್ವತವಾಗಿರುವಂತೆ ಮಾಡತ್ತೆ.
ಹಾಗಾದ್ರೆ ಈ ಮಣಿ ಪ್ಲಾಂಟ್ ಗಿಡವನ್ನು ಹೇಗೆ ಮತ್ತು ಎಲ್ಲಿ ಇಡಬೇಕು, ಎಂಬ ವಿವರಣೆಗಾಗಿ ಮುಂದೆ ಓದಿ…
- ಎಲೆಕ್ಟ್ರಾನಿಕ್ ವಸ್ತುಗಳ ಪಕ್ಕ ಮನಿ ಪ್ಲಾಂಟ್ ಇಡಬೇಕು, ಏನಕ್ಕೆ ಗೊತ್ತಾ?
ವಿಜ್ಞಾನಿಗಳ ಪ್ರಕಾರ ಮನಿ ಪ್ಲಾಂಟ್ ಕಂಪ್ಯೂಟರ್, ಟೆಲಿವಿಷನ್, ವೈ ಪೈ ರೂಟರ್ ಪಕ್ಕ ಇಟ್ರೆ ಅದು ವಿಕಿರಣವನ್ನ ಸೆಳೆಯತ್ತೆ.
2015 ನೇ ಇಸ್ವಿನಲ್ಲಿ ಭಾರತೀಯ ಸಂಶೋಧಕರಾದ ಫಾರೂಕ್ ಅಲಿ, ಮತ್ತು ಬಿ. ಬೆಳ್ಮಗಿ ಹಾಗೂ ಸುಧಾಬಿಂದು ರೇ ಇವ್ರುಗಳು ಸ್ಪೆಸಿಫಿಕ್ ಅಬ್ಸಾರ್ಬಷನ್ ರೇಟ್ ಮತ್ತು ಮನಿ ಪ್ಲಾಂಟ್ನ ರಕ್ಷಣಾ ವಿಕಿರಣದ ಪ್ರಮಾಣ 2.4 GHz. ಅವ್ರಗಳ ಅಧ್ಯಯನದ ಪ್ರಕಾರ ಮನಿ ಪ್ಲಾಂಟ್ ಎಲೆಕ್ಟ್ರೋ ಮಾಗ್ನೆಟಿಕ್ ಶೀಲ್ಡಿಂಗ್ನ್ ತನ್ನ ಸುತ್ತ ಮುತ್ತ ಇರೋ ಹಾಗೆ ನೋಡ್ಕೊಳ್ಳತ್ತೆ.
ಈ ಶೀಲ್ಡ್ ಅನ್ನೋದು ಇ ಎಮ್ ವಿಕಿರಣವನ್ನ ಸೆಳ್ಕೊಂಡ್ ಬಿಡತ್ತೆ. ಇದು ನಮ್ಗೆಲ್ಲಾ ಆಗ್ ಬರ್ದೆ ಇರೋ ವಿಕಿರಣ. ಅದ್ಕೊಸ್ಕರನೇ ಇದ್ನ ಕಂಪ್ಯೂಟರ್ ವೈ ಫೈ ನಂತಹ ಎಲೆಕ್ಟ್ರಾನಿಕ್ ವಸ್ತುಗಳ ಪಕ್ಕ ನೀರ್ ಹಾಕಿ ಬೆಳ್ಸಿ.
- ವಾಸ್ತು ಪ್ರಕಾರ ಮನಿ ಪ್ಲಾಂಟ್ನ್ ಅಗ್ನಿ ಮೂಲೆಯಲ್ಲಿ ಇಡಬೇಕು…
ವಾಸ್ತು ಪ್ರಕಾರ ಮನಿ ಪ್ಲಾಂಟ್ನ್ ಅಗ್ನಿ ಮೂಲೆಯಲ್ಲಿ ಇಡೊದ್ರಿಂದ ಅಗ್ನಿ ಮೂಲೆಯಲ್ಲಿ ಇಡೋದ್ರಿಂದ ನಿಮ್ಗೂ ನಿಮ್ ಮನೆಯವ್ರಿಗೂ ಒಳ್ಳೆಯ ಆರೋಗ್ಯ ತನ್ನಿಂದ ತಾನೇ ಬರತ್ತೆ.
- ಚೂಪಾದ ಮೂಲೆಗಳಿರೋ ಮೇಜಿನ ಮಧ್ಯಭಾಗದಲ್ಲಿ ಮನಿ ಪ್ಲಾಂಟ್ ಇಟ್ಟು ನೋಡಿ
ಇದರಿಂದ ಒತ್ತಡ ಮತ್ತೆ ಆತಂಕ ಇರೋರಿಗೆ ಕಮ್ಮಿಯಾಗತ್ತೆ.
- ಎಲೆಗಳು ನೆಲ ತಾಗೋ ಹಾಗೆ ಅಥ್ವಾ ಮೇಜಿನ ಕೆಳ್ಗಡೆ ಬೀಳೋ ಹಾಗೆ ಮನಿ ಪ್ಲಾಂಟ್ ಗಿಡ ಇಡ್ಬೇಡಿ
ಮೇಲೆ ಹೇಳಿದ ಹಾಗೇನಾದ್ರೂ ಇಟ್ರೆ ಮನೆಯಲ್ಲಿ ಯಾವಾಗ್ ನೋಡಿದ್ರೂ ಜಗಳ ಅಂತ ವಾಸ್ತು ಶಾಸ್ತ್ರ ಹೇಳುತ್ತೆ.
- ಯಾವ್ದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಮನಿ ಪ್ಲಾಂಟ್ ಇಡ್ಬೇಡಿ, ನೀರಿನ ತರಹ ದುಡ್ಡು ಖರ್ಚಾಗತ್ತೆ ನೋಡಿ
ಜೊತೆಗೆ ನಿಮಗೆ ಅನಾರೋಗ್ಯ ಹಾಗೋದು ಹೆಚ್ಚು. ಇಲ್ಲಿ ಓದಿ:-ಈ ಗಿಡ ನೆಟ್ಟರೆ ಶ್ರಿಮಂತರಾಗುತ್ತಾರಂತೆ..!
- ಎಲೆಗಳು ಒಣಗಿದ್ರೆ, ಹಳ್ದಿಯಾಗಿದ್ರೆ ಕಿತ್ತಾಕಿ ಇಟ್ಬಿಡಿ, ಇಲ್ಲಾಂದ್ರೆ ವಾಸ್ತು ದೋಷ ಬರತ್ತೆ
- ಆಗ್ಗಾಗ್ಗೆ ಚನ್ನಾಗಿ ಎಲೆಗಳನ್ನ ಕತ್ತರಿಸಿ ಒಳ್ಳೆ ಶೈನಿಂಗ್ ಕೊಡಿ — ಎನರ್ಜಿಗೋಸ್ಕರ