ವಿಚಿತ್ರ ಆದರೂ ಸತ್ಯ

ಈ ಕುಟುಂಬ ಹೇಗಿತ್ತು ಈಗ ಹೇಗಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

January 04, 2018

ಫಿಟ್ ಅಂಡ್ ಫೈನ್ ಆಗಿರಬೇಕೆಂದು ಹೊಸ ವರ್ಷಕ್ಕೆ ಬಹುತೇಕರು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ನಂತರದಲ್ಲಿ ಇದನ್ನು ಪಾಲಿಸುವವರು ಮಾತ್ರ ಕೆಲವೇ ಕೆಲವು ಮಂದಿ. ಆದರೆ ಚೀನಾದ ಕುಟುಂಬವೊಂದು ಇಂತಹ ನಿರ್ಧಾರ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ.

2 ವರ್ಷದ ಪೋಟೋಗ್ರಾಫರ್ ಜೆಸ್ಸಿಗೆ 6 ತಿಂಗಳ ಹಿಂದೆ ಸಧೃಡ ಮೈಕಟ್ಟನ್ನು ಹೊಂದಬೇಕೆಂಬ ಬಯಕೆ ಉಂಟಾಗಿತ್ತು. ಇದನ್ನು ಆತ ತನ್ನ ಪತ್ನಿ ಬಳಿ ಹೇಳಿಕೊಂಡಿದ್ದ. ಮಗನ ನಿರ್ಧಾರವನ್ನು ಆತನ ತಾಯಿಯೂ ಬೆಂಬಲಿಸಿದ್ದಾರೆ.

ಇವರೆಲ್ಲರು ಸೇರಿ ಜೆಸ್ಸಿಯ ತಂದೆಯನ್ನೂ ಒಪ್ಪಿಸಿದ್ದು. ನಾಲ್ವರು ಜಾಗಿಂಗ್ ನಿಂದ ತಮ್ಮ ಫಿಟ್ನೆಸ್ ಕಾರ್ಯಕ್ರಮ ಆರಂಭಿಸಿದ್ದಾರೆ. ಜೆಸ್ಸಿ ಪತ್ನಿ ಆಗ ಗರ್ಭಿಣಿಯಾಗಿದ್ದ ಕಾರಣ ಆಕೆಯನ್ನು ಹೊರತುಪಡಿಸಿ ಉಳಿದವರು ಕ್ರಮೇಣ ಕಠಿಣ ವ್ಯಾಯಾಮವನ್ನು ಶುರುಮಾಡಿದ್ದಾರೆ.

ಇದರ ಪರಿಣಾಮ 6 ತಿಂಗಳಲ್ಲಿ ಕಂಡುಬಂದಿದ್ದು, ಇಡೀ ಕುಟುಂಬ ಫಿಟ್ ಅಂಡ್ ಫೈನ್ ಆಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಜೆಸ್ಸಿ ಪ್ರತಿದಿನ ದಿನಚರಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ಅವರ ದೇಹದಲ್ಲಾದ ಬದಲಾವಣೆಯ ಪೋಟೋಗಳು ಈಗ ವೈರಲ್ ಆಗಿವೆ.