ಸುದ್ದಿ

ಈ ಕಿರಾತಕನೆ ನಮ್ಮ ಸೈನಿಕರನ್ನು ಕೊಂದವನು…ಇವನು ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?

By admin

February 15, 2019

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್​ಪಿಎಫ್​ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯ ನಂತರ ದಾಳಿಯ ಹೊಣೆ ಹೊತ್ತ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ದಾಳಿಗೆ ಮುನ್ನ ಮಾತನಾಡಿದ ಕೊನೆಯ ವಿಡಿಯೊ ವೈರಲ್ ಆಗಿದೆ.

ಹಿಂದೆ ಜೈಶ್ ಸಂಘಟನೆಯ ಧ್ವಜವನ್ನು ಹೊಂದಿರುವ ವಿಡಿಯೋದಲ್ಲಿ ದಕ್ಷಿಣ ಕಾಶ್ಮೀರದ ಕಾಕಪೊರದ ಆದಿಲ್​ ಅಲಿಯಾಸ್​ ವಕಾಸ್​ ಎಂಬ ಉಗ್ರ ಮಾತನಾಡಿದ್ದಾನೆ. ಅವನ ಸುತ್ತ ಹಲವು ಅತ್ಯಾಧುನಿಕ ಸ್ವಯಂಚಾಲಿತ ರೈಫೆಲ್ಸ್​ಗಳು ಇವೆ. ಈ ವಿಡಿಯೋ ನಿಮ್ಮನ್ನು ತಲುಪುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ. ಕಳೆದ ಒಂದು ವರ್ಷ ನಾನು ಜೈಶ್​- ಇ- ಮೊಹಮ್ಮದ್​ ಸಂಘಟನೆಯಲ್ಲಿ ಕಳೆದಿದ್ದೇನೆ ಮತ್ತು ಕಾಶ್ಮೀರದ ಜನರಿಗೆ ಇದು ನನ್ನ ಕಡೆಯ ಸಂದೇಶ,” ಎಂದು ಹೇಳಿದ್ದಾನೆ.

ಅಲ್ಲದೆ ಉತ್ತರ ಕಾಶ್ಮೀರ ಜನತೆಗೆ ಕೂಡ ಸಂದೇಶ ಕಳುಹಿಸಿದ್ದು ಅದರಲ್ಲಿ ದಕ್ಷಿಣ ಕಾಶ್ಮೀರದ ಜನರು ತಮ್ಮ ಹಕ್ಕುಗಳಿಗಾಗಿ ಭಾರತ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ಅವರ ಜೊತೆ ಉತ್ತರ, ಕೇಂದ್ರ ಕಾಶ್ಮೀರ ಮತ್ತು ಜಮ್ಮು ಭಾಗದ ಜನರು ಕೂಡ ಕೈಜೋಡಿಸುವ ಕಾಲ ಸನ್ನಿಹಿತವಾಗಿದೆ. ನಮ್ಮ ಕೆಲವು ಉಗ್ರಗಾಮಿ ಕಮಾಂಡರ್ ಗಳನ್ನು ಕೊಂದ ಮಾತ್ರಕ್ಕೆ ನಮ್ಮನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಬೇಕಾಗಿಲ್ಲ ಎಂದು ಕೂಡ ಹೇಳಿದ್ದಾನೆ. ವಿಡಿಯೊದಲ್ಲಿ ಕಾಶ್ಮೀರದ ಭದ್ರತಾ ಪಡೆ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ್ದಾನೆ.

ಜೈಶ್​ ಇ- ಮೊಹಮ್ಮದ್​ ಉಗ್ರಗಾಮಿ ಸಂಘಟನೆ ಈ ಹಿಂದೆ ಭಾರತದ ಮೇಲೆ ಹಲವು ಭೀಕರ ದಾಳಿ ನಡೆಸಿದೆ. ಐಸಿಎ18 ವಿಮಾನ ಹೈಜಾಕ್​, 2001ರಲ್ಲಿ ಸಂಸತ್ತು​ ಮೇಲೆ ದಾಳಿ, ನಾಗರೊಟ ದಾಳಿ, ಉರಿ ದಾಳಿ ಹಾಗೂ ಪಠಾಣ್​ಕೋಟ್​ ವಾಯುಪಡೆ ಮೇಲೆ ದಾಳಿ ನಡೆಸಿತ್ತು.