ಕಾರ್ಮಿಕ ಕಾಯ್ದೆಯನ್ವಯ ಎಲ್ಲಾ ವಯಗಳಲ್ಲೂ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕಾನೂನು ಜಾರಿಗೊಂಡರೆ ನಾಲ್ಕು ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.
ಈ ಹೊಸ ಕನಿಷ್ಠ ವೇತನ ವಿಧೇಯಕದಲ್ಲಿನ ಅಧಿನಿಯಮದ ಪ್ರಕಾರ ಎಲ್ಲಾ ವಲಯಗಳಲ್ಲಿನ ಕಾರ್ಮಿಕರಿಗೆ ಪ್ರತಿ ತಿಂಗಳೂ ಕನಿಷ್ಠ ವೇತನ 18,000 ರೂ. ನೀಡಬೇಕಾಗುತ್ತದೆ. ಈ ಪ್ರಸ್ತಾವನೆಯನ್ನು ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಅಂಗೀಕರಿಸಿ ಒಪ್ಪಿಗೆ ನೀಡಿದೆ.
ಮುಂಗಾರು ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದ್ದು, ಅಲ್ಲಿ ಅನುಮೋದನೆ ಸಿಕ್ಕ ನಂತರ ಈ ಕಾನೂನು ಜಾರಿಗೆ ಬರಲಿದೆ.
ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ.
ಕನಿಷ್ಠ ವೇತನ ವಿಧೇಯಕ ಕಾನೂನು ಜಾರಿಗೆ ಬಂದರೆ, ಯಾರಿಗೆ ಸಿಹಿ ಯಾರಿಗೆ ಕಹಿ:-
ಕಾನೂನು ತಜ್ಞರ ಪ್ರಕಾರ ಈ ನೂತನ ವಿಧೇಯಕ ಸಿಹಿ ಸುದ್ದಿಯೂ ಹೌದು, ಕಹಿ ಸುದ್ದಿಯೂ ಹೌದು! ಏಕಂದರೆ ಕೇಂದ್ರ ಸರಕಾರವು ಇದುವರೆಗೂ ತನ್ನ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಮಾತ್ರ ಕನಿಷ್ಠ ವೇತನದ ನಿರ್ಧಾರ ತೆಗೆದುಕೊಳ್ಳುತಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಈ ಕನಿಷ್ಠ ವೇತನದ ಬಗ್ಗೆ ಆ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದು ಕೊಳ್ಳುತ್ತಿದ್ದವು. ಹೀಗಾಗಿ ಭಾರತದಲ್ಲಿ ಏಕರೂಪದ ವೇತನವಿರಲಿಲ್ಲ.
ಈ ಕಾನೂನು ಬಂದ್ರೆ ಹಲವು ಸಣ್ಣ ಕಂಪನಿಗಳಿಗೆ ತೊಂದರೆಯಾಗಲಿದೆ. ಏಕೆಂದರೆ ನಮ ದೇಶದಲ್ಲಿ ಬಹುಪಾಲು ಜನ ಸಣ್ಣ ಮತ್ತು ಮಧ್ಯಮ ಕಂಪನಿಗಳನ್ನು ನಡೆಸುತ್ತಿದ್ದಾರೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತುಂಬಾ ಕಡಿಮೆಯಲ್ಲಿದ್ದಾರೆ. 500 ಅಥವಾ ಅದಕ್ಕಿಂತ ಮೇಲ್ಪಟ್ಟ ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ತುಂಬಾ ಕಡಿಮೆ.
ಹಾಗಾಗಿ ಈ ಕನಿಷ್ಠ ವೇತನ ಜಾರಿ ಬಂದ್ರೆ ಸಂತಸವೇನೋ ನಿಜ. ಆದ್ರೆ ಸಣ್ಣ ಮತ್ತು ಮಧ್ಯಮ ಕಂಪನಿಗಳು ಕನಿಷ್ಠ ವೇತನವನ್ನು ಕೊಡಲಾಗದೆ ಕೆಲಸದಿಂದ ಕಾರ್ಮಿಕರನ್ನು ತೆಗೆಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.