ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.
ಡೆತ್ ಕಣಿವೆಯಲ್ಲಿನ ಕಲ್ಲುಗಳು ತಮ್ಮದೆ ಆದ ನೌಕಾಯಾನವನ್ನು ನಡೆಸುತ್ತವೆ. ಈ ಕುರಿತು ಹಲವಾರು ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ನೀಡಲಾಗುತ್ತದೆ. ಆದರೆ ಅವು ಯಾವುದೂ ನಿಜವಾದ ತರ್ಕವನ್ನು ಒದಗಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಅತಿ ಹೆಚ್ಚು ಬಿಸಿ ಇರುವ ಪ್ರದೇಶ:-
ಡೆತ್ ವ್ಯಾಲಿ ಎನ್ನುವುದು ಒಂದು ಮರುಭೂಮಿಯ ಕಣಿವೆ. ಇದು ಕ್ಯಾಲಿಫೋರ್ನಿಯಾದಲ್ಲಿದೆ. ಇದನ್ನು ಡೆತ್ ವ್ಯಾಲಿ ಹಾಗೂ ಅತ್ಯಂತ ಬಿಸಿ ಅಥವಾ ತಾಪಮಾನ ಇರುವ ಪ್ರದೇಶ ಎಂದು ಹೇಳಲಾಗುತ್ತದೆ.
ಈ ಪ್ರದೇಶವು ಸುಮಾರು ಒಂದು ಶತಮಾನಗಳಷ್ಟು ಹಿಂದಿನ ರಹಸ್ಯ ಕಥೆಯನ್ನು ಒಳಗೊಂಡಿದೆ.
ಕಲ್ಲುಗಳು ತಾವಾಗಿಯೇ ಚಲಿಸುತ್ತವೆ:-
ಈ ಪ್ರದೇಶದಲ್ಲಿರುವ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಆ ಕಲ್ಲನ್ನು ನೋಡುತ್ತಿರುವಾಗ ಅವು ಚಲಿಸುವುದಿಲ್ಲ. ಯಾರು ಇಲ್ಲದ ಸಮಯದಲ್ಲಿ ಚಲಿಸುತ್ತವೆ ಎಂದು ಹೇಳಲಾಗುತ್ತದೆ.
ಕಲ್ಲುಗಳು ಚಲಿಸುವ ಸ್ಥಳವನ್ನು “ರೇಟ್ರ್ಯಾಕ್ ಪ್ಲಾಯಾ” ಎಂದು ಕರೆಯುತ್ತಾರೆ. ಇದನ್ನು ತೇಲುವ ಕಲ್ಲುಗಳಿಗೆ ಹೆಸರಾದ ಒಣ ಸ್ಥಳ ಎಂತಲೂ ಕರೆಯುತ್ತಾರೆ.
ಇದು ರಹಸ್ಯವಾಗಿದೆ:-
ಈ ಒಣ ನೆಲದ ಮೇಲೆ ಕಲ್ಲುಗಳು ಸಾಗಿರುವ ಗುರುತನ್ನು ಕಾಣಬಹುದು. ಯಾವ ಮಾರ್ಗವಾಗಿ ಹೋಗಿದೆ ಎನ್ನುವುದನ್ನು ಸಹ ನಮಗೆ ಗೋಚರವಾಗುತ್ತದೆ. ಈ ಕಲ್ಲನ್ನು ಚಲಿಸಲು ಯಾವುದೇ ವ್ಯಕ್ತಿಯ ಬಲವನ್ನು ಬಳಸುವುದಿಲ್ಲ.
ಈ ಕ್ರಿಯೆಯು ತಾನಾಗಿಯೇ ನೈಸರ್ಗಿಕವಾಗಿ ನಡೆಯುತ್ತದೆ.
ನೋಡುವಾಗ ಕಾಣಿಸುವುದಿಲ್ಲ:-
ಯಾರಾದರೂ ನೋಡುವಾಗ ಈ ಕಲ್ಲುಗಳು ಚಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ನಿಜಕ್ಕೂ ಒಂದು ಆಶ್ಚರ್ಯಕರವಾದ ಸಂಗತಿಯಾಗಿದೆ. ಇನ್ನೊಂದು ವಿಚಾರವೆಂದರೆ ಇಲ್ಲಿರುವ ಎಲ್ಲಾ ಕಲ್ಲುಗಳು ಚಲಿಸುವುದಿಲ್ಲ. ಕೆಲವು ಕಲ್ಲುಗಳು ಮಾತ್ರ ಮುಂದೆ ಸಾಗುತ್ತವೆ ಎಂದು ಪರೀಕ್ಷಿಸಲಾಗಿದೆ.
ಚಲಿಸುವ ಕಲ್ಲುಗಳು ಸುಮಾರು 2-3 ವರ್ಷಗಳಿಗೊಮ್ಮೆ ಚಲಿಸುತ್ತವೆ. ಅಲ್ಲದೆ ಎಲ್ಲಾ ಕಲ್ಲುಗಳು ಒಂದೇ ಮಾರ್ಗದಲ್ಲಿ ಚಲಿಸುವುದಿಲ್ಲ. ಈ ಕಲ್ಲುಗಳು ಕಾಂತೀಯ ಪರಿಣಾಮದಿಂದ ಚಲಿಸುತ್ತದೆ ಎಂದು ನಂಬಲಾಗಿದೆ.
ವಿವಿಧ ಸಿದ್ಧಾಂತಗಳು:-
ಈ ಸ್ಥಳದಲ್ಲಿ ನಡೆಯುವ ಅಪರೂಪದ ವಿದ್ಯಮಾನದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಡೆತ್ ವ್ಯಾಲಿಯಲ್ಲಿ ಬಲವಾದ ಗಾಳಿ ಬೀಸುತ್ತದೆ. ಅದರಿಂದಲೇ ಕಲ್ಲುಗಳು ಚಲಿಸುತ್ತವೆ ಎಂದು ಅನೇಕರು ಅಭಿಪ್ರಾಯಿಸುತ್ತಾರೆ.
ಗಾಳಿಗೆ ಚಲಿಸುವುದಾದರೆ ಕಲ್ಲು ಮಾತ್ರ ಏಕೆ ಚಲಿಸುತ್ತದೆ? ಎನ್ನುವುದು ಪ್ರಶ್ನೆಯಾಗಿದೆ.
ಇದು ಇನ್ನೂ ರಹಸ್ಯವಾಗಿಯೇ ಉಳಿದಿದೆ:-
ಕೆಲವು ಸಿದ್ಧಾಂತಗಳು ಮತ್ತು ಸಂಶೋಧನೆಗಳು ಗಾಳಿ ಮತ್ತು ಉಷ್ಣತೆಯ ಸಂಯೋಜನೆಯಿಂದ ಈ ವಿದ್ಯಮಾನ ಉಂಟಾಗುತ್ತದೆ ಎಂದು ಹೇಳುತ್ತವೆ.
ಈ ತೇಲುವ ಕಲ್ಲುಗಳು ಮಣ್ಣಿನ ಮೇಲ್ಮೈಗಳಲ್ಲಿ ಅಂಕುಡೊಂಕಾದ ಹಾದಿಯನ್ನು ಮಾಡುತ್ತದೆ. ಈ ವಿಚಾರವನ್ನು ತಿಳಿಯಲು ವರ್ಷಗಳಕಾಲ ಅಲ್ಲೇ ಕುಳಿತು ಅಧ್ಯಯನ ನಡೆಸಬೇಕಷ್ಟೇ.