ಆರಂಭದಲ್ಲಿ ವಾರದಲ್ಲಿ ಒಂದು ದಿನ ರಜೆ ಪಡೆಯಲು ವಿಶ್ವದ ಜನರು ಪರದಾಡಿದ್ದರು. ನಂತ್ರ ಕೆಲ ಕಂಪನಿಗಳು ವಾರದಲ್ಲಿ ಎರಡು ದಿನ ರಜೆ ನೀಡಲು ಶುರು ಮಾಡಿದ್ವು.
ಇಷ್ಟಾದ್ರೂ ಉದ್ಯೋಗಿಗಳು ವಾರದಲ್ಲಿ ಮೂರು ದಿನ ರಜೆ ಸಿಕ್ಕರೆ ಎಷ್ಟು ಚೆಂದವೆಂದು ಆಲೋಚನೆ ಮಾಡ್ತಾರೆ. ಭಾರತದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಆದ್ರೆ ಬ್ರಿಟನ್ ಕಂಪನಿಯೊಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ.
ಪೋರ್ಟ್ಕುಲಸ್ ಲೆಗ್ಸ್ ಹೆಸರಿನ ಕಂಪನಿ ವಾರದಲ್ಲಿ ಮೂರು ದಿನ ರಜೆ ನೀಡುವುದಾಗಿ ಹೇಳಿದೆ. ಅಂದ್ರೆ ಕೆಲಸಗಾರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಿದ್ರೆ ಸಾಕು. ಉಳಿದ ಮೂರು ದಿನವನ್ನು ಅವ್ರಿಗೆ ಬೇಕಾದಂತೆ ಕಳೆಯಬಹುದು. ಈ ನಿರ್ಧಾರದಿಂದ ಕೆಲಸಗಾರರು ಸಂತೋಷವಾಗಿರುತ್ತಾರೆಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಆರಂಭಿಕ ಫಲಿತಾಂಶ ಉತ್ತಮವಾಗಿದೆ. ಉದ್ಯೋಗಿಗಳು ಖುಷಿಯಾಗಿದ್ದಾರೆ. ಗ್ರಾಹಕರಿಗೆ ಒಳ್ಳೆ ಸೇವೆ ಸಿಗ್ತಿದೆ ಎಂದು ಕಂಪನಿ ಹೇಳಿದೆ. ಆರಂಭದಲ್ಲಿ 9 ಮಂದಿ ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ರಜೆ ನೀಡಿ ಕಂಪನಿ ಪರೀಕ್ಷೆ ನಡೆಸಿತ್ತಂತೆ. ನಂತ್ರ ಎಲ್ಲ ಉದ್ಯೋಗಿಗಳಿಗೆ ಈ ಸೇವೆ ನೀಡಿದೆ.