ಗ್ಯಾಜೆಟ್

ಈ ಆ್ಯಪ್’ನಲ್ಲಿ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿರಾ,ಎಚ್ಚರ..!ಬಯಲಾಗಲಿದೆ ರಹಸ್ಯ!ಹೇಗೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ…

By admin

September 15, 2017

ಸರಹ  ಆ್ಯಪ್ ಎಂಬ ಹೆಸರಿನ ಈ ಅಪ್ಲಿಕೇಷನ್ ಈಗಂತೂ ತುಂಬಾ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದರ ಮೂಲಕ ಯಾರಿಗೂ ನೀವು ರಹಸ್ಯ ಮೆಸೇಜ್ ಕಳುಹಿಸಬಹುದು ಅಗಿದೆ. ಜೈನ್ ಅಲಾಬ್ದೀನ್ ತೌಫಿಕ್ ಎಂಬ ಸೌದಿಅರೇಬಿಯಾದ ವ್ಯಕ್ತಿ ತಯಾರಿಸಿರುವ ಅಪ್ಲಿಕೇಷನ್ ಇದಾಗಿದೆ .

 

ಈ ಸರಹಾಹ್ ಆಪ್ ಡೌನಲೋಡ್ ಮಾಡಿಕೊಂಡು ಐಡಿ ಕ್ರಿಯೇಟ್ ಮಾಡಲು ನಿಮ್ಮಲ್ಲಿ “ಜಿ ಮೈಲ್ ಐಡಿ ಪಾಸ್ವರ್ಡ್ “ನ ಅವಶ್ಯಕತೆಯಿದೆ .ಪೇಸಬುಕ್ಕಿನ ರೀತಿ ಇಲ್ಲಿಯೂ ಪ್ರೋಫೈಲ್ ಫೋಟೋ ಹಾಕಬಹುದು.

ನಂತರ ನೀವು ಯಾರ ಐಡಿಗೆ ಹೋಗಿ ಮೆಸೇಜ್/ಕಾಮೆಂಟ್ ಹಾಕಿದರೂ ಸಹ ಅದು ಮೆಸೇಜ್/ಕಾಮೆಂಟ್ ಹಾಕಿದ ವ್ಯಕ್ತಿಯ ಮಾಹಿತಿ ನಿಮಗೆ ಏನೇನೂ ತೋರಿಸುವುದಿಲ್ಲ ! ರಿಪ್ಲೇಕೂಡ ಮಾಡಲಾಗದು. ಮೆಸೇಜ್ ಬಂದಿದೆಯಷ್ಟೇ ಎನ್ನುತ್ತದೆ.

 

ಆದ್ರೆ ನೀವು ಕಳುಹಿಸುವ ಸಂದೇಶಗಳು ಸೀಕ್ರೆಟ್ ಆಗಿ ಇರುತ್ತೆ, ಯಾರಿಗೂ ಗೊತ್ತಿರುವುದಿಲ್ಲ ಎಂದು ವಾದಿಸುತ್ತಿದ್ದ ಈ ಆಪ್ ವಾಸ್ತವದಲ್ಲಿ ಬಳಕೆದಾರರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸರ್ವರ್‍ನಲ್ಲಿ ಅಪ್‍ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದೆ.

 

ಹಲುವು ವರದಿಗಳ ಪ್ರಕಾರ ಸಾರ ಆಪ್  ನಿಮ್ಮ ಎಲ್ಲ ಇಮೇಲ್ ಸಂಪರ್ಕ ಮತ್ತು ಫೋನ್ ಸಂಪರ್ಕದ ಮಾಹಿತಿಯನ್ನು ಸರ್ವರ್‍ಗೆ ಹಾಕಿಡುತ್ತದೆ. ಬಿಶಪ್ ಪೋಕ್ಸ್‍ನ ಭದ್ರತಾ ವಿಶ್ಲೇಷಕಿ ಝಚರಿ ಜೂಲಿಯನ್ ಈ ಆಪ್ ನ ಬಗ್ಗೆ ವಿವರಿಸಿದ್ದಾರೆ. ಸರಹದ ಅಭಿವೃದ್ಧಿ ಮಾಡಿದ ಝೈನ್ ಅಲ್ ಅಬಿದಿನ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಸರಹ ಎಂಬ ಅರೇಬಿಕ್ ಪದದ ಅರ್ಥ ಪ್ರಾಮಾಣಿಕತೆ ಎಂದು. ನಿಮ್ಮ ಸಂದೇಶಗಳು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿ, ತಾನು ಪ್ರಾಮಾಣಿಕ ಎಂದು ಹೇಳಿಕೊಂಡಿತ್ತು. ಆದರೆ ಆಪ್‍ನ ಪ್ರೈವಸಿ ಪಾಲಿಸಿಯಲ್ಲಿ ಆಪ್ ಬಳಕೆದಾರರ ಡಾಟ ಸ್ಟೋರ್ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಸರಹ ಆಪ್  ಆಪಲ್ ಮತ್ತು ಆಂಡ್ರಾಯಿಡ್ ಎರಡು ಫೋನ್‍ಗಳ ಬಳಕೆದಾರರ ಕುರಿತ ಮಾಹಿತಿಯನ್ನು ಸಂಗ್ರಹಿಸಿಡುತ್ತಿದೆ. ಹಾಗಾಗಿ ತನ್ನ ಪ್ರಾಮಾಣಿಕತಣವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಹೀಗಾಗಿ ನೀವು ಈ ಆಪ್ ಮೂಲಕ ಕಳುಹಿಸುವ ಪ್ರೇಮ ಸಂದೇಶಗಳು, ಬೈಗುಳ ಸಂದೇಶಗಳು ಕಳುಹಿಸಿ ಅಥವಾ ಕಳುಹಿಸದೇ ಇರೀ, ನಿಮ್ಮ ಹೆಸರು, ವಿಳಾಸಗಳು ಬಹಿರಂಗಗೊಳ್ಳುವ ಸೂಚನೆಗಳು ಇವೆ. ಇದೆಲ್ಲಾ ಈ ಸರಹ ಆಪ್ ಅಭಿವ್ರುದ್ದಿಪಡಿಸುವವರ ಮೇಲೆ ಅವಲಂಬಿತವಾಗಿರುತ್ತದೆ.