ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ. ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ.
ಕನಿಷ್ಟ ೧ ರಿಂದ ೩ ಸೆ. ಮೀ ವರೆಗೆ ಹರಡಿಕೊಂಡಿರುತ್ತದೆ. ಈ ಜಾತಿಯ ಸಸ್ಯಗಳು ಹಸಿರು, ಕಡುಪು ಹಸಿರು ಹಸಿರು, ಕೆಂ ಮತ್ತು ಚಿನ್ನದಂತ ಹಸಿರು ಬಣ್ಣಗಳಲ್ಲಿ ಕಂಡುಬರುತ್ತದೆ. ಗಿಡದ ಸಮೂಲವನ್ನು ಅರೆದು ಕಾಲಿನ ಅಣಿ (ಕಲ್ಲೂತ್ತು) ಇರುವ ಕಡೆ ಲೇಪಿಸಿದರೆ, ಕಲ್ಲೂತ್ತು ಗುಣವಾಗುತ್ತದೆ.
ಸಮೂಲದ ರಸವನ್ನು ಮೊಸರಿನೊಡನೆ ಕುಡಿಸುವುದರಿಂದ ಮೂತ್ರ ತಡೆಯು ಗುಣವಾಗುತ್ತದೆ.
ಗಿಡದ ಸ್ವರಸವು ಮಕ್ಕಳ ನಾಯಿ ಕೆಮ್ಮಿಗೆ ಔಷಧವಾಗಿದೆ. ಹಗೇವು ಅಥವಾ ಕಣಜದೊಳಗೆ ಹೋದವರು ಮೂರ್ಛೆ ಹೋದಾಗ ಗಿಡದ ಸಮೂಲವನ್ನು ಕುಟ್ಟಿ ಹಿಂಡಿ ರಸ ಮಾಡಿ ಕುಡಿಸಿದರೆ, ಬೇಗ ಎಚ್ಚರಗೊಳ್ಳುತ್ತಾರೆ.ಇದನ್ನು “ಡ್ರೊಸೆರಾ ಬರ್ಮಾನ್ನಿ ಪ್ಲಾಂಟ್” ಎನ್ನುತ್ತಾರೆ.