ಸುದ್ದಿ

ಈ ʼಮೊಬೈಲ್‍‌ʼ ನಲ್ಲಿ ಇನ್ಮುಂದೆ ಸಿಗಲ್ಲ ಗೂಗಲ್ ಪ್ಲೇ ಸ್ಟೋರ್…..?

By admin

May 20, 2019

ಹುವಾವೇ ಮೊಬೈಲ್‍ ಬಳಕೆ ಮಾಡ್ತಿರೋ ಗ್ರಾಹಕರೇ ಗಮನಿಸಿ. ಇನ್ಮುಂದೆ ಹುವಾವೇ ಮೊಬೈಲ್‍ ಗಳಿಗೆ ಗೂಗಲ್ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಜಿ ಮೇಲ್‍, ಗೂಗಲ್‍ ಮ್ಯಾಪ್‍ ಹಾಗೂ ಯೂಟೂಬ್‍ ಆಪ್‍ ಗಳು ಲಭ್ಯವಾಗಲ್ಲ. ಕಾರಣ ಚೀನಾದ ಹುವಾವೇ ಸಂಸ್ಥೆಯೊಂದಿಗೆ ಗೂಗಲ್‍ ಸಂಸ್ಥೆ ಸಂಬಂಧ ಕಡಿದುಕೊಂಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಸರ್ಕಾರ ಹುವಾವೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದೀಗ ಗೂಗಲ್‍ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದು, ಹುವಾವೇ ಕಂಪನಿಯೊಂದಿಗೆ ವ್ಯವಹಾರಗಳನ್ನು ಕಡಿತಗೊಳಿಸಿದೆ.

SHANGHAI, CHINA – FEBRUARY 23: A store of the Chinese brand Huawei in the city center on February 23, 2018 in SHANGHAI, China. (Photo by Vincent Isore/IP3/Getty Images)

ಸದ್ಯ ಗ್ರಾಹಕರು ಈಗ ಬಳಕೆ ಮಾಡ್ತಿರೋ ಹುವಾವೇ ಸ್ಮಾರ್ಟ್ ಫೋನ್‍ ಗಳಲ್ಲಿ ಗೂಗಲ್ ಆಪ್‍‌ ಗಳು ಲಭ್ಯವಿದೆ. ಆದ್ರೆ ಇನ್ಮುಂದೆ ಬರುವ ಮೊಬೈಲ್‍ ಗಳಿಗೆ ಗೂಗಲ್‍ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಯೂಟ್ಯೂಬ್‍, ಗೂಗಲ್ ಮ್ಯಾಪ್‍ ಯಾವುದೂ ಲಭ್ಯವಿರುವುದಿಲ್ಲ.

ಗೂಗಲ್‍ ಸಂಸ್ಥೆಯ ಈ ನಿರ್ಧಾರದಿಂದಾಗಿ ಹುವಾವೇ ಕಂಪನಿ ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಲಿದೆ ಅಂತಾ ಹೇಳಲಾಗ್ತಿದೆ.