ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ಎಷ್ಟು ಉಪಯೋಗವಿದೆ ಎಂದು ಗೊತ್ತಾದರೆ ನೀವು ಅದನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಯೋಚಿಸುವಿರಿ.
ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.
ಈ ವಿಷಯ ಅರಿತು ನಿಮ್ಮ ಹುಬ್ಬು ಮೇಲೇರಿದರೂ ಇದು ನಿಜವೆಂದು ಈಗ ಸಾಬೀತಾಗಿದ್ದು ಈ ಸಿಪ್ಪೆಗಳಲ್ಲಿ ಹುದುಗಿರುವ ಪೋಷಕಾಂಶ ಹಾಗೂ ಇತರ ಔಷಧೀಯ ಗುಣಗಳ ಬಗ್ಗೆ ಹಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಒಡೆದ ಹಿಮ್ಮಡಿಗೆ:- ಈ ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆತ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೆ ಈರುಳ್ಳಿ ಸಿಪ್ಪೆಯನ್ನು ಬಳಸಬಹುದು.
ಈರುಳ್ಳಿ ಸಿಪ್ಪೆಯನ್ನು 10 ರಿಂದ 20 ನಿಮಿಷ ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಕಾಲು ಅದ್ದಿಟ್ಟರೆ ಹಿಮ್ಮಡಿ ಮೃದುವಾಗುವುದು.
ಕಂಪೋಸ್ಟ್ ಗೆ ಬಳಸಿ:- ನಿಮ್ಮ ಮನೆಯಲ್ಲಿ ಸಸಿಯಿದ್ದರೆ ಅದಕ್ಕೆ ಈರುಳ್ಳಿ ಸೊಪ್ಪನ್ನು ಕಂಪೋಸ್ಟ್ ಮಾಡಿ ಹಾಕಿ. ಇದು ಗಿಡಗಳಿಗೆ ಬೆಸ್ಟ್ ಗೊಬ್ಬರವಾಗುತ್ತದೆ.
ಸೂಪ್ ಗೆ ಬಳಸಿ:- ಈರುಳ್ಳಿ ಸಿಪ್ಪೆಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಂಶವಿರುತ್ತದೆ. ಹಾಗಾಗಿ ಸೂಪ್ ಮಾಡುವಾಗ ಇದನ್ನು ಬಳಸಬಹುದು.
ಈ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಕರಗದ ನಾರು, ಫ್ಲೇವನಾಯ್ಡುಗಳು, ವಿಟಮಿನ್ ಎ,ಸಿ ಮತ್ತು ಇ ಇವೆ. ಫ್ಲೇವನಾಯ್ಡುಗಳಲ್ಲಿ ಕ್ವೆರ್ಸಟಿನ್ ಎಂಬ ಪೋಷಕಾಂಶದ ಅಂಶ ಗರಿಷ್ಠ ಪ್ರಮಾಣದಲ್ಲಿದ್ದು ಇದೊಂದು ಉತ್ತಮ ಆಂಟಿ ಆಕ್ಸಿಡೆಂಟು ಹಾಗೂ ಉರಿಯೂತ ನಿವಾರಕವೂ ಆಗಿದೆ.
ಈ ಪೋಷಕಾಂಶಕ್ಕೆ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಗುಣವಿದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ನಿವಾರಿಸುವ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ಅಂಟಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.