ಈ ಮದುವೆ ಅನ್ನುವುದೇ ವಿಚಿತ್ರ ನೋಡ್ರಿ.ಯಾರು ಯಾವಾಗ ಯಾರನ್ನ,ಏತಕ್ಕೆ ಮದ್ವೆ ಆಗ್ತಾರೆ ಅಂತ ಹೇಳೋದಕ್ಕೆ ಆಗಲ್ಲ.ಇದು ದೇಶ,ಭಾಷೆ ಸಂಸ್ಕೃತಿ ಎಲ್ಲವನ್ನು ಮೀರಿದ್ದು.
ಇಷ್ಟೆಲ್ಲಾ ಪೀಟಿಕೆ ಯಾಕಂತೀರಾ..ನೋಡಿ,ಚೀನಾ ದೇಶದ ಮಹಿಳೆ, ತನ್ನ ವಯಸ್ಸಿಗಿಂತ 15 ವರ್ಷ ವಯಸ್ಸು ಕಡಿಮೆ ಇರುವ ಯುವಕನನ್ನು ಮದುವೆಆಗಿದ್ದಾರೆ.
ಹೌದು,ಇದು ನಿಜ.ನಿಮ್ಗೆ ಈಗೊಂದು ಪ್ರಶ್ನೆ ಕಾಡ್ತಾಯಿರಬಹುದು. ಆ ಯುವಕ ಈ ಮದುವೆಗೆ ಒಪ್ಪಿದ್ದಾದ್ರು ಹೇಗೆ ಅಂತ ಆಲ್ವಾ.ಕಾರಣ ಇದೆ.
ಯುವಕ ಆ ಮದುವೆಗೆ ಒಪ್ಪಲು ಏನು ಕಾರಣ..?
38 ವರ್ಷದ ಮಹಿಳೆ ಆ ಮಹಿಳೆ, 23 ವಯಸ್ಸಿನ ಆ ಯುವಕನನ್ನು ಮದುವೆಆಗಲು ಬರೋಬ್ಬರಿ 5 ಕೋಟಿ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದಾಳೆ.ಇವರು ಜನವರಿ 10 ರಂದು ಮದುವೆಯಾಗಿದ್ದಾರೆ.ಈ ಹೆಂಗಸಿಗೆ ಈಗಾಗಲೇ ಮದುವೆ ಆಗಿದ್ದು, 14 ವರ್ಷದ ಮಗ ಕೂಡ ಇದ್ದಾನೆ.
ಈಕೆಗೆ ಗಂಡ ಇಲ್ಲವಾದ ಕಾರಣ ತನಗಿಂತ ಚಿಕ್ಕವಯಸ್ಸಿನವನನ್ನು ಮದುವೆಯಾಗಲು ಬಯಸಿದ್ದರು.ಹಾಗಾಗಿ ವಯಸ್ಸಿನಲ್ಲಿ ತನಗಿಂತ 15ವರ್ಷ ಚಿಕ್ಕವನಾದ ಯುವಕನೊಂದಿಗೆ ಮದುವೆಯಾಗಲು, ಆ ಯುವಕನಿಗೆ ಪ್ರಸ್ತಾಪ ಮಾಡಿದ್ದರು.
ಆಚ್ಚರಿ ಎಂಬಂತೆ 38ವರ್ಷದ ಆಕೆಯನ್ನು ಮದುವೆಯಾಗಲು ಆ ಯುವಕ ಕೂಡ ಒಪ್ಪಿದ್ದನು.ಆದರೆ ಮೊದ ಮೊದಲು ಆ ಯುವಕನ ಪೋಷಕರು ಇದಕ್ಕೆ ಒಪ್ಪಿರಲಿಲ್ಲ.ಆದರೆ ನೋಡಿ ಹಣ ಏನೆಲ್ಲಾ ಮಾಡುತ್ತೆ ಅಂದ್ರೆ,ಅವರು 50ಲಕ್ಷ ಹಣ ಕೊಡುವುದಾಗಿ ಹೇಳಿದ ತಕ್ಷಣ ಪೋಷಕರು ಸಹ ಒಪ್ಪಿದ್ದಾರೆ.ನಂತರ ಎರಡೂ ಕಡೆ ಪರಸ್ಪರ ಒಪ್ಪಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ಹೆಣ್ಣು ಬಿಳಿ ಬಣ್ಣದ ಗೌನ ಧರಿಸಿದ್ದಾರೆ. ಜೊತೆಗೆ ಚಿನ್ನದ ಬಳೆಗಳು, ನೆಕ್ಲೇಸ್ ಮತ್ತು ಓಲೆಯನ್ನು ಧರಿಸಿದ್ದಾರೆ.