ಸುದ್ದಿ

ಇವಿಎಂ ಅಭ್ಯರ್ಥಿ ಸ್ಥಾನಗಳಲ್ಲಿ ಸಿಎಂ ಮಗನಿಗೆ ಮೊದಲ ಸ್ಥಾನ!ಆದರೆ ಸುಮಲತಾಗೆ ಯಾವ ಸ್ಥಾನ?ಈ ಸುದ್ದಿ ನೋಡಿ..

By admin

March 30, 2019

ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸ್ಥಾನ ನೀಡಲಾಗಿದೆ.

ಅದರಲ್ಲಿ ಮೊದಲ ಹೆಸರೇ ಮುಖ್ಯಮಂತ್ರಿ ಪುತ್ರ ನಿಖಿಲ್‍ ಕುಮಾರಸ್ವಾಮಿಯವರದ್ದಾದ್ರೆ, ಕೊನೆಯಿಂದ ಎರಡನೇಯವರಾಗಿ ಸುಮಲತಾ ಹೆಸರಿದೆ…!

ಇವಿಎಂನ ಕ್ರಮ ಸಂಖ್ಯೆ 1 ರಲ್ಲೇ ನಿಖಿಲ್‍ ಕುಮಾರಸ್ವಾಮಿಯವರ ಹೆಸರು ನೀಡಲಾಗಿದೆ. ಆದ್ರೆ ಸುಮಲತಾ ಅಂಬರೀಷ್‍ ಹೆಸರನ್ನು ಇವಿಎಂನಲ್ಲಿ ಕೊನೆಯಿಂದ ಎರಡನೇಯದಾಗಿ ಹಾಕಲಾಗಿದೆ. ಅಲ್ಲದೆ ಸುಮಲತಾ ಅಂಬರೀಷ್‍ ಹೆಸರಿನ ಮೊದಲು ಮತ್ತು ಕೊನೆಗೆ ಸುಮಲತಾ ಎಂಬ ಪಕ್ಷೇತರ ಅಭ್ಯರ್ಥಿಗಳ ಹೆಸರಿದೆ. ಇದು ಮತದಾರರಿಗೆ ಗೊಂದಲವಾಗಬಹುದು ಅಂತಾ ಹೇಳಲಾಗ್ತಿದೆ.

ಆದ್ರೆ ಈ ಬಾರಿ ವಿಶೇಷ ಅಂದ್ರೆ ಅಭ್ಯರ್ಥಿಗಳ ಫೋಟೋ ಕೂಡಾ ಇವಿಎಂನಲ್ಲಿ ಬರುತ್ತದೆ. ಹೀಗಾಗಿ ಮತದಾರರಿಗೆ ಗೊಂದಲ ಸೃ಼ಷ್ಟಿಯಾಗಲ್ಲ ಅನ್ನೋದು ಚುನಾವಣಾಧಿಕಾರಿಗಳ ಭರವಸೆ.

  1. ನಿಖಿಲ್ ಕೆ- ಜೆಡಿಎಸ್ – ತೆನೆ ಹೊತ್ತ ಮಹಿಳೆ
  2. ನಂಜುಂಡಸ್ವಾಮಿ – ಬಿಎಸ್‍ಪಿ – ಆನೆ
  3. ಗುರುಲಿಂಗಯ್ಯ – ಐಎನ್‍ಸಿಪಿ – ಕಬ್ಬು ಬೆಳೆಗಾರ
  4. ಡಿ ಸಿ ಜಯಶಂಕರ – ಐಎನ್‍ಪಿ – ಚಪಾತಿ ರೋಲರ್
  5. ಸಿ ಪಿ ದಿವಾಕರ್ – ಉತ್ತಮ ಪ್ರಜಾಕೀಯ ಪಾರ್ಟಿ – ಆಟೋ ರಿಕ್ಷಾ
  6. ಸಂತೋಷ್ ಹೆಚ್‍ಪಿ – ಇಂಜಿನಿಯರ್ಸ್ ಪಾರ್ಟಿ – ಟ್ರಾಕ್ಟರ್ ಚಲಾಯಿಸುವ ರೈತ
  7. ಅರವಿಂದ್ – ಪ್ರೇಮಾನಂದ್ ಪಕ್ಷೇತರ – ಮೈಕ್
  8. ಕೌಡ್ಲೆ ಚನ್ನಪ್ಪ – ಪಕ್ಷೇತರ – ಏಸಿ
  9. ತುಳಸಪ್ಪ ದಾಸರ – ಪಕ್ಷೇತರ – ಹೆಲ್ಮೆಟ್
  10. ಹೆಚ್ ನಾರಾಯಣ – ಪಕ್ಷೇತರ – ಸಿಸಿಟಿವಿ
  11. ಎನ್‍ಸಿ ಪುಟ್ಟರಾಜು – ಪಕ್ಷೇತರ – ಟಿವಿ
  12. ಪ್ರೇಮಕುಮಾರ ವಿ.ವಿ – ಪಕ್ಷೇತರ – ತೆಂಗಿನ ತೋಟ
  13. ಮಂಜುನಾಥ್ ಬಿ – ಪಕ್ಷೇತರ – ಅಲ್ಮೇರಾ
  14. ಜಿ.ಮಂಜುನಾಥ್ – ಪಕ್ಷೇತರ – ವಜ್ರ
  15. ಲಿಂಗೇಗೌಡ ಎಸ್ ಹೆಚ್ – ಪಕ್ಷೇತರ – ವಿಷಲ್
  16. ಸಿ.ಲಿಂಗೇಗೌಡ – ಪಕ್ಷೇತರ – ಚಪ್ಪಲಿ
  17. ಎಂ ಎಲ್ ಶಶಿಕುಮಾರ್ – ಪಕ್ಷೇತರ – ಸಿತಾರ್
  18. ಸತೀಶ್‍ಕುಮಾರ್ ಟಿ ಎನ್ – ಪಕ್ಷೇತರ – ಕಂಪ್ಯೂಟರ್
  19. ಸುಮಲತಾ – ಪಕ್ಷೇತರ – ತಳ್ಳುಗಾಡಿ
  20. ಎ ಸುಮಲತಾ – ಪಕ್ಷೇತರ – ಕಹಳೆ ಊದುತ್ತಿರುವ ವ್ಯಕ್ತಿ
  21. ಎಂ ಸುಮಲತಾ – ಪಕ್ಷೇತರ – ಬೇಬಿ ವಾಕರ್
  22. ಸುಮಲತಾ ಪಿ – ಪಕ್ಷೇತರ – ಬ್ಯಾಟ್