ನಮ್ಮ ದೇಶದಲ್ಲಿ ಮಳೆ ಬರುವಂತೆ ಪ್ರಾರ್ಥಿಸಿ ಕತ್ತೆ, ಕಪ್ಪೆ ಹಾಗೂ ಇತರ ಪ್ರಾಣಿಗಳ ಜೊತೆ ಮಾಡುವೆ ಮಾಡುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳ ಜೊತೆ ಮದುವೆ ಮಾಡಿಕೊಂಡು ಮೆರೆವಣಿಗೆ ಮಾಡೋದು ಎಲ್ಲರಿಗು ಗೊತ್ತಿರುವ ವಿಚಾರ.ಹೀಗೆ ವಿದೇಶಗಳಲ್ಲಿ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಆದರೆ ವಿದೇಶದ ಮೇಯರ್ ಒಬ್ಬರು ಇಂತಹ ಘಟನೆ ಬೆಳಕಿಗೆ ಬಂದಿದೆ.
ಮೆಕ್ಸಿಕೋದ ಓಕ್ಸಾಕ ನಗರದ. ಮೆಕ್ಸಿಕನ್ ಮೇಯರ್ ಎಂಬವರು ಮೀನುಗಾರರಿಗೆ ಒಳ್ಳೆಯದಾಗಲಿ ಎಂದು ಮೊಸಳೆಯನ್ನು ಮದುವೆಯಾಗಿದ್ದಾರೆ. ಮೊಸಳೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಆ ಮೊಸಳೆಗೆ ಬಾಯಿಯನ್ನು ಕಟ್ಟಿ ಹಾಕಲಾಗಿತ್ತು. ಈ ಮೊಸಳೆ ಮದುವೆ ಮುನುಷ್ಯರ ಮದುವೆಗಿಂತ ಅದ್ಧೂರಿಯಾಗಿ ನಡೆಯಿತು.
ಈ ಮದುವೆಗೆ ಸುಮಾರು ಜನರು ಸಾಕ್ಷಿ ಆಗಿದ್ದರೆ ಆ ಮಸೂಳೆಯನ್ನು ಮಧುಮಗಳಂತೆ ಸಿಂಗರಿಸಿ ಎಲ್ಲಾ ಸಂಪ್ರದಾಯಗಳಂತೆ ಮದುವೆಯನ್ನು ಮಾಡಲಾಯಿತು.
ಈ ಮದುವೆಯಲ್ಲಿ ಇವರಿಗೆ ಇರುವ ನಂಬಿಕೆ ಅಂದ್ರೆ ಮಧುಮಗಳು ಶಾಂತಿ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತಾಳೆ. ಅನ್ನವುದು ಇವರ ನಂಬಿಕೆ ಇದೆ ಮತ್ತು ಈ ಧಾರ್ಮಿಕ ಸಂಪ್ರದಾಯ ಹಿಂದಿನ ಕಾಲದಿಂದ ಅಂದರೆ 1781 ರಿಂದಲೂ ನಡೆದುಕೊಂಡು ಬಂದಿದೆ ಅನ್ನೋದು ವರದಿಯಾಗಿದೆ.