ದೆವ್ವ -ಭೂತಗಳ ಇರುವಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ದೆವ್ವಗಳ ಬಗ್ಗೆ ಕೆಲವರು ನಂಬಿದ್ರೆ, ಇನ್ನೂ ಕೆಲವರು ನಂಬೋದಿಲ್ಲ.ಆದ್ರೆ ನಾವು ಆಗಾಗ ದೆವ್ವಗಳ ಇರುವಿಕೆ ಬಗ್ಗೆ ಕೇಳುತ್ತಲೇ ಇರುತ್ತೇವೆ.ಆದ್ರೆ ಈ ಗ್ರಾಮದಲ್ಲಿ ಹೆಣ್ಣು ದೆವ್ವ ಇದೆ ಎಂಬ ಕಾರಣಕ್ಕೆ ಇಡೀ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿರುವ ಘಟನೆ ನಡೆದಿದೆ.
ಹೌದು, ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಾಶಿಗುಡ್ ಎಂಬ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಆ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿದ್ದಾರಂತೆ. ಕಾಶಿಗುಡ್’ನ ಈ ಗ್ರಾಮದಲ್ಲಿ ಕತ್ತಲಾದ ಮೇಲೆ ಹೆಣ್ಣು ಪ್ರೇತಾತ್ಮಗಳು ಪುರುಷರ ಮೇಲೆ ದಾಳಿ ಮಾಡುತ್ತಿವೆಯಂತೆ. ಹಾಗಾಗಿ ಪುರುಷರೆಲ್ಲರು ಹೆಣ್ಣು ದೆವ್ವ ಕಾಡುತ್ತದೆ ಎಂಬ ಭೀತಿಯಲ್ಲಿ ಹೈರಾಣಾಗಿದ್ದಾರೆ. ಅಲ್ಲಿ ಕುಟುಂಬಗಳು ಊರೇ ಬಿಟ್ಟು ಹೋಗುತ್ತಿವೆ. ಇನ್ನು ಊರಲ್ಲಿ ಹೆಣ್ಮಕ್ಕಳು ವಾಸಿಸಲು ದೈರ್ಯ ತೋರುತ್ತಿಲ್ಲ.
ಇನ್ನು ಪುರುಷರು ಊರಲ್ಲಿ ಸಂಜೆಯ ಹೊತ್ತು ಮನೆ ಸೇರಿದ್ರೆ, ಮತ್ತೆ ಹೊರ ಬರುವುದು ಮರುದಿನ ಬೆಳಿಗ್ಗೆ. ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುಳಿಯುತ್ತಿದ್ದಾರೆ. ಆದ್ದರಿಂದ ಪುರುಷರು ಗ್ರಾಮದಲ್ಲಿ ಇರಲು ಭಯಬೀತರಾಗಿ ಜೀವ ಉಳಿದರೆ ಸಾಕು ಎಂದು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಶಿಗುಡ ಗ್ರಾಮದಲ್ಲಿ ಸುಮಾರು ಕುಟುಂಬಗಳು ವಾಸ ಮಾಡುತ್ತಿದ್ದು . ಗ್ರಾಮದ ಸಮೀಪ ಕಲ್ಲು ಕ್ಯಾರಿ ಇದ್ದು ಹೆಚ್ಚಿನವರು ಅಲ್ಲಿಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ.ಆದರೆ ಈಗ ಕೆಲವು ದಿನಗಳಿಂದ ನಮ್ಮ ಮೇಲೆ ಯಾರೋ ದಾಳಿ ಮಾಡಿದಂತೆ ಭಾಸವಾಗುತ್ತಿದೆ. ಹೀಗಾಗಿ ಭಯಗೊಂಡು ನಾವು ಊರನ್ನು ತೊರೆಯುತ್ತಿದ್ದೇವೆ ಎಂದು ಈ ಗ್ರಾಮದ ಪುರುಷರು ಹೇಳಿದ್ದಾರೆ.
ಈ ಗ್ರಾಮದ ಜನರು ಊರನ್ನು ತೊರೆಯುತ್ತಿರುವ ಕಾರಣ ಗ್ರಾಮದಲ್ಲಿರುವ ಮನೆಗಳೆಲ್ಲಾ ಬೀಗ ಹಾಕಿದ್ದಾರೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಗ್ರಾಮ ಈಗ ದೆವ್ವಗಳ ಕೊಂಪೆಯಾಗಿದೆ.ಸ್ವಲ್ಪ ಜನ ಕತ್ತಲಾಗುವ ಮುನ್ನವೇ ಮನೆಗೆ ಬಂದು ಸೇರುತ್ತಿದ್ದು ಮುಂಜಾನೆ ಆಗುವವರೆಗೂ ಯಾರೂ ಆಚೆ ಹೊರ ಬರಲು ಧೈರ್ಯ ತೋರುತ್ತಿಲ್ಲ.