ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಕೋಪಗೊಂಡ ವಾನರನೋರ್ವ ಸೂರ್ಯನನ್ನೇ ತಿನ್ನಲು ಪ್ರಯತ್ನಿಸಿ ಮುಖ ಊದಿಸಿಕೊಂಡ ಅನ್ನೋದನ್ನ ಈಗಲೂ ಜಗತ್ತಿನ 100 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಕ್ರಿಶ್ಚಿಯನ್,ಮುಸ್ಲಿಂ,ಯಹೂದಿ ಮತ್ತು ಹಿಂದು ಗೆಳೆಯರಲ್ಲಿ ಹೇಳಿದಾಗ ಹಿಂದು ಒಬ್ಬನನ್ನು ಬಿಟ್ಟು ಎಲ್ಲ ಬಿದ್ದು ಬಿದ್ದು ನಕ್ಕರು.
ಸಣ್ಣ ಸಣ್ಣ ಹಕ್ಕಿಗಳು ತಮ್ಮ ಸಣ್ಣ ಸಣ್ಣ ಕೊಕ್ಕುಗಳಿಂದ ಕಲ್ಲುಗಳನ್ನ ಹಾಕಿ ಆನೆಗಳ ಇಡೀ ಸೈನ್ಯವನ್ನೇ ಧ್ವಮ್ಸಗೈದವು ಅನ್ನೋದನ್ನ ಈಗಲೂ ಜಗತ್ತಿನ 160 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಕ್ರಿಶ್ಚಿಯನ್, ಮುಸ್ಲಿಂ, ಹಿಂದು ಮತ್ತು ಯಹೂದಿ ಗೆಳೆಯರಲ್ಲಿ ಹೇಳಿದಾಗ ಮುಸಲ್ಮಾನನೊಬ್ಬನನ್ನು ಬಿಟ್ಟು ಎಲ್ಲ ನಕ್ಕರು.
ದೇವರ ಶಾಪದಿಂದಾಗಿ ಅಂಜೂರದ ಮರವು ಬೇರು ಸಮೇತ ಕಳೆಗುಂದಿತು ಅನ್ನೋದನ್ನ ಈಗಲೂ ಜಗತ್ತಿನ 200 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಹಿಂದು, ಮುಸ್ಲಿಂ, ಯಹೂದಿ ಮತ್ತು ಕ್ರಿಶ್ಚಿಯನ್ ಗೆಳೆಯರಲ್ಲಿ ಹೇಳಿದಾಗ ಕ್ರೈಸ್ತನೋರ್ವನನ್ನು ಬಿಟ್ಟು ಎಲ್ಲ ನಕ್ಕರು
ಇಲ್ಲಿ ಎಲ್ಲರೂ ಕೋಮುವಾದಿಗಳೇ ತಮ್ಮ ಬುಡಕ್ಕೆ ನೀರು ಬಂದಾಗ ಮಾತ್ರ ಅವರ ಕೋಮುವಾದಿ ಬಣ್ಣ ಹೊರಬರುತ್ತದೆ ಆದ್ದರಿಂದ ಯಾರು ಯಾರನ್ನು ಕೋಮುವಾದಿ ಎಂದು ಬೆರಳು ತೋರಿಸುವ ಮೊದಲು ನಮಗೆ ಆ ನೈತಿಕ ಹಕ್ಕು ಇದೆಯೇ ಅನ್ನೋದನ್ನ ಯೋಚಿಸುವುದು ಒಳಿತು.
ಕೃಪೆ:- ವಾಸಿಮ್ ಅಲ್ತಾಫ್