ಸುದ್ದಿ

ಇಲ್ಲಿದೆ ನೋಡಿ ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಪಟ್ಟಿ..!

By admin

October 14, 2019

‘ಬಿಗ್ ಬಾಸ್ ಕನ್ನಡ ಸೀಸನ್ 7’ ನಿನ್ನೆ (ಅಕ್ಟೋಬರ್ 13) ಅದ್ದೂರಿಯಾಗಿ ಶುಭಾರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ  ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ.

ಕಿರುತೆರೆ ಕಲಾವಿದರು, ಗಾಯಕರು, ಲೇಖಕರು ಈ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.ಹಾಸ್ಯ ನಟ ಕುರಿ ಪ್ರತಾಪ್ ರಿಂದ ಶುರುವಾದ ಬಿಗ್ ಬಾಸ್ ಮನೆ ಪ್ರವೇಶ ನಟ ಹರೀಶ್ ರಾಜ್ ಮೂಲಕ ಅಂತ್ಯವಾಯಿತು. ಹಿರಿಯ ಪತ್ರಕರ್ತ ರವಿ ಬೆಳಗೆರೆ,..

 ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ ಪ್ರಿಯಾಂಕಾ, ಸುಜಾತ, ದುನಿಯಾ ರಶ್ಮಿ, ಕಿರುತೆರೆ ನಟಿ ಚಂದನ್, ದೀಪಿಕಾ ದಾಸ್, ಭೂಮಿ ಶೆಟ್ಟಿ, ನಿರೂಪಕಿ ಚ್ರೈತ್ರ, ಚೈತ್ರ ಕೊಟ್ಟೂರ್, ನಟ ಚಂದನ್, ಶೈನ್ ಶೆಟ್ಟಿ, ಗುರುಲಿಂಗ ಸ್ವಾಮಿಜಿ, ಡ್ಯಾನ್ಸರ್ ಕಿಶನ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದಾರೆ.

ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 11 ಗಂಟೆವರೆಗೆ ಪ್ರಸಾರ ಆಯಿತು. ಅಂದಹಾಗೆ, ‘ಬಿಗ್ ಬಾಸ್ ಕನ್ನಡ ಸೀಸನ್ 7’ ಸಂಭಾವ್ಯ ಪಟ್ಟಿಯಲ್ಲಿ ಹೆಸರೇ ಇಲ್ಲದೆ ಇದ್ದ ನಟ ಹರೀಶ್ ರಾಜ್ ಅಚ್ಚರಿ ಎಂಬಂತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ಹರೀಶ್ ರಾಜ್ ಗುರುತಿಸಿಕೊಂಡಿದ್ದು, ಇತ್ತೀಚಿಗೆ ಲಿಮ್ಕಾ ದಾಖಲೆಯಲ್ಲಿ ಇವರು ಹೆಸರು ನಮೂದಿಸಿಕೊಂಡಿದ್ದಾರೆ.