ಸುದ್ದಿ

ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

By admin

January 06, 2018

ಇರುವೆ ಎಲ್ಲರಿಗೂ ಚಿರಪರಿಚಿತ. ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.

ಇರುವೆ ಬಗೆಗಿನ ಈ 15 ವಿಷಯಗಳು ತಿಳಿದ್ರೆ, ನಮ್ಗೆ ರೋಮಾಂಚನವಾಗ್ದೆ ಇರಲ್ಲ…

  1. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ.

source

2. ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ

3. ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ.

4. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ 15% ದಿಂದ 25% ರಷ್ಟಾಗುವುದು.

source

5. ಇರುವೆಗಳಲ್ಲಿ 12,000 ಕ್ಕೂ ಅಧಿಕ ತಳಿಗಳಿವೆ.

6. ಥೊರಾಕ್ಸ್ ಎಂದು ಕರೆಯಲ್ಪಡುವ ಇರುವೆಯ ಮುಂಡದಲ್ಲಿ ಆರು ಕಾಲುಗಳಿರುತ್ತವೆ. ಪ್ರತಿ ಕಾಲಿನ ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಉಗುರಿನ ರಚನೆಯಿದ್ದು ಇದು ಇರುವೆಗೆ ಹತ್ತುವಲ್ಲಿ ಮತ್ತು ವಸ್ತುಗಳಿಗೆ ಜೋತುಬೀಳುವುದಕ್ಕೆ ನೆರವಾಗುತ್ತದೆ.

7. ರಾಣಿ ಇರುವೆಯು ೩೦ ವರ್ಷಗಳವರೆಗೆ ಜೀವಿಸಬಲ್ಲುದು. ಕೆಲಸಗಾರ ಇರುವೆಗಳ ಆಯುಷ್ಯ ೧ ರಿಂದ ೩ ವರ್ಷಗಳು. ಆದರೆ ಗಂಡಿರುವೆಗಳು ಕೆಲವೇ ವಾರಗಳವರೆಗೆ ಜೀವಿಸಿರುವುವು.

8. ಇರುವೆಗಳು ಕಚ್ಚುವುದರ ಮೂಲಕ ಮತ್ತು (ಕೆಲ ತಳಿಗಳಲ್ಲಿ) ಕೊಂಡಿಯಿಂದ ಕುಟುಕುವುದರ ಮೂಲಕ ಆಕ್ರಮಣ ಮತ್ತು ಸ್ವರಕ್ಷಣೆ ಎರಡನ್ನೂ ಸಾಧಿಸುತ್ತವೆ.

9. ದಕ್ಷಿಣ ಅಮೆರಿಕಾದ ಬುಲೆಟ್ ಇರುವೆಗಳ ಕುಟುಕು ಸಮಸ್ತ ಕೀಟಜಗತ್ತಿನಲ್ಲಿಯೇ ಅತಿ ತೀಕ್ಷ್ಣವಾದುದು.

10. ಆಸ್ಟ್ರೇಲಿಯಾದ ಜ್ಯಾಕ್ ಜಂಪರ್ ಇರುವೆಗಳ ಕುಟುಕುವಿಕೆಯಿಂದಾಗಿ ಕೆಲ ಮಾನವರು ಸಾವನ್ನಪಿದ್ದರೆ ಮತ್ತು ಪ್ರತಿ ವರ್ಷ ಅನೇಕ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ.

source

11. ಮಾನವನನ್ನು ಹೊರತುಪಡಿಸಿದರೆ ಇರುವೆಯು ಆಹಾರಕ್ಕಾಗಿ ವ್ಯವಸಾಯದಲ್ಲಿ ತೊಡಗುವ ಏಕೈಕ ಪ್ರಾಣಿಯಾಗಿದೆ.

12. ಎಲ್ಲಾ ತರಹದ ಇರುವೆಗಳೂ ಸಂಘಜೀವಿಗಳಲ್ಲ. ಆಸ್ಟ್ರೇಲಿಯಾದ ಬುಲ್‌ಡಾಗ್ ಇರುವೆಯು ಅತಿ ಪ್ರಾಚೀನ ತಳಿಯಾಗಿದ್ದು ಗಾತ್ರದಲ್ಲಿ ಬಲು ದೊಡ್ಡದು. ಈ ಇರುವೆಯು ಒಂಟಿಯಾಗಿಯೇ ಬೇಟೆಯಾಡುತ್ತದೆ.

13. ಆಫ್ರಿಕಾದ ಸೈಫು ಇರುವೆಯು ಹೊಟ್ಟೆಬಾಕತನಕ್ಕೆ ಹೆಸರಾದುದು. ಇವುಗಳ ಸೈನ್ಯ ಹೊಲ ತೋಟಗಳಿಗೆ ನುಗ್ಗಿ ಅಲ್ಲಿನ ಎಲ್ಲಾ ಕೀಟಗಳನ್ನೂ ಭಕ್ಷಿಸಿ ಬಲು ಬೇಗ ಮುಂದೆ ಹೊರಟುಬಿಡುವುದರಿಂದ ಆಫ್ರಿಕಾದ ಮಸಾಯ್ ಜನಾಂಗದವರು ಇವನ್ನು ಬಲು ಗೌರವದಿಂದ ಕಾಣುವರು.

source

14. ಇರುವೆಗಳ ಜೀವನ ಕ್ರಮ ವಿಸ್ಮಯಕರಆ ಕಾರಣದಿಂದಲೇ ‘ಇರುವೆ ವಿಜ್ಞಾನ’ (ಮರ್ಮೆಕಾಲಜೀ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ.

15. ಇರುವೆಗಳ ಶರೀರ ಶಕ್ತಿ ಅಸಾಮಾನ್ಯ. ಭಾರ ಎಳೆಯುವ, ಎತ್ತುವ ಸಾಮರ್ಥ್ಯ ಅವಕ್ಕೆ ವಿಪರೀತ. ತಮ್ಮ ಶರೀರಕ್ಕಿಂತ ಬಹುದೊಡ್ಡ ಗಾತ್ರದ ತಮ್ಮ ಶರೀರದ ಐವತ್ತು ಪಟ್ಟು ತೂಕದ ವಸ್ತುಗಳನ್ನು ಅವು ಸಲೀಸಾಗಿ, ವೇಗವಾಗಿ ಸಾಗಿಸುತ್ತವೆ. ತಮ್ಮ ದೇಹದ ನೂರಾರು ಮಡಿ ತೂಕದ ವಸ್ತುಗಳನ್ನು ಹೊರಬಲ್ಲ ಪ್ರಭೇದಗಳೂ ಇವೆ.

ಕೃಪೆ:-upscgk