ಗ್ಯಾಜೆಟ್

ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

By admin

May 26, 2017

ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.

ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆ “ಇನ್‌ಮಾರ್‌ಸ್ಯಾಟ್’ ಸಹಾಯದಿಂದ ಬಿಎಸ್ಎನ್ಎಲ್ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡಲಿದೆ. ಸಾಮಾನ್ಯ ಮೊಬೈಲ್ ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಸ್ಯಾಟಿಲೈಟ್ ಫೋನ್ ಸೇವೆ ಇರಲಿದೆ. ಇದಕ್ಕಾಗಿ ಇನ್‌ಮಾರ್‌ಸ್ಯಾಟ್ ಒಟ್ಟು 14 ಉಪಗ್ರಹಗಳನ್ನು ಹೊಂದಿದೆ.

ಇಲ್ಲಿ ಓದಿರಿ :- ರೂ 799ಕ್ಕೆ ನೋಕಿಯಾ !!!

ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆ:- 1979ರಲ್ಲಿ ಯುನಿಟೆಡ್ ನೇಷನ್ ನಲ್ಲಿ ಆರಂಭವಾದ ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆಯಲ್ಲಿ ಭಾರತ ಸಂಸ್ಥಾಪಕ ಸದಸ್ಯವನ್ನು ಹೊಂದಿದೆ. ಭಾರತ ಸದ್ಯ ಪುಣೆಯಲ್ಲಿ ಸ್ಯಾಟಿಲೈಟ್ ಫೋನ್ ಸೇವೆಗೆ ಅಗತ್ಯವಿರುವ ಭೂ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆ.

ವಿಮಾನದಲ್ಲಿ, ಹಡಗಿನಲ್ಲೂ ಸೇವೆ ಇರಲಿದೆ:- ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡುತ್ತಿದ್ದು, ಇದು ವಿಮಾನದಲ್ಲಿ ಪ್ರಯಾಣಿಸುವವರಿಗೆ ಮತ್ತು ಹಡಗಿನಲ್ಲಿ ಪ್ರಯಾಣಿಸುವರಿಗೆ ಸಹಾಯಕಾರಿಯಾಗಲಿದ್ದು, ಎಲ್ಲಿಂದ ಬೇಕಾದರು ಕರೆ ಮಾಡುವ ಮತ್ತು ಸ್ವೀಕರಿಸುವ ಅವಕಾಶ ಇರಲಿದೆ.

ವಾಯ್ಸ್ ಮತ್ತು ಎಸ್‌ಎಂಎಸ್ ಮಾತ್ರ ಸಾಧ್ಯ:-  ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಸೇವೆಯಲ್ಲಿ ಬಳಕೆದಾರರು ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಂಎಸ್ ಗಳನ್ನು ಮಾತ್ರವೇ ಮಾಡಲು ಸಾಧ್ಯವಿರಲಿದೆ. ಇದನ್ನು ಬಳಕೆ ಮಾಡಬೇಕಾಗದರೆ ನೆಟ್‌ವರ್ಕ್ ಇಲ್ಲ ಎನ್ನುವ ಮಾತೇ ಇಲ್ಲ.

ಟಿಸಿಎಲ್ ಸೇವೆ ಅಂತ್ಯ:- ಇದುವರೆಗೂ ದೇಶದಲ್ಲಿ ಸ್ಯಾಟಲೈಟ್ ಫೋನ್‌ ಸೇವೆಯನ್ನು ನೀಡುತ್ತಿದ್ದ ಟಾಟಾ ಕಮ್ಯುನಿಕೇಷನ್ಸ್ ಲಿ ಜೂನ್ ಅಂತ್ಯದಿಂದ ತನ್ನ ಸೇವೆಯನ್ನು ನಿಲ್ಲಿಸಲಿದ್ದು, ಅದನ್ನು ಬಿಎಸ್ಎನ್ಎಲ್ ಮುಂದುವರೆಸಿಕೊಂಡು ಹೋಗಲಿದೆ ಎನ್ನಲಾಗಿದೆ.

ಮೊಬೈಲ್ ನಂತೆಯೇ ಇರಲಿದೆ:- ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಬಳಕೆಗೆ ಮೊಬೈಲ್‌ ಫೋನ್‌ ಮಾದರಿಯ ಉಪಕರಣ ದೊರೆಯಲಿದೆ. ಇದಕ್ಕಾಗಿ ದೊಡ್ಡ ಗ್ರಾತದ ಉಪಕರಣ ಬಳಕೆಯ ಅವಶ್ಯಕತೆ ಇರುವುದಿಲ್ಲ.

ಶೀಘ್ರವೇ ಜನ ಸಾಮಾನ್ಯರಿಗೂ ಈ ಸೇವೆ:- ಸದ್ಯ ಭಾರತದಲ್ಲಿ ಸ್ಯಾಟಿಲೈಟ್ ಫೋನ್ ಸೇವೆಯನ್ನು ಪೊಲೀಸ್‌ ವ್ಯವಸ್ಥೆ, ರೈಲ್ವೆ ಇಲಾಖೆ, ಗಡಿ ಭದ್ರತಾ ಪಡೆ ಮತ್ತು ಹಡಗುಗಳಲ್ಲಿ ಮಾತ್ರವೇ ಬಳಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಆದರೆ ಮುಂದೇ ಜನರಿಗೆ ಈ ಸೇವೆ ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ.

ಆದರೆ ದುಬಾರಿ ಬೆಲೆ:- ಸ್ಯಾಟಿಲೈಟ್ ಫೋನ್ ಪೋನ್‌ನಲ್ಲಿ ಒಂದು ಕರೆ ಮಾಡಬೇಕಾಗಿದರೆ ಪ್ರತಿ ನಿಮಿಷಕ್ಕೆ ರೂ.35 ರಿಂದ ರೂ. 45 ಪಾವತಿಸಬೇಕಾಗಿದೆ.