ದೇಶ-ವಿದೇಶ

ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

By admin

July 03, 2017

ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ ಜಾಸ್ತಿಯಾಗುತ್ತಿದೆ. ಹೀಗಾಗಿ ವಿಶ್ವದ ಮೊದಲ ಫಾರೆಸ್ಟ್ ಸಿಟಿಯ ನಿರ್ಮಾಣಕ್ಕೆ ಚೀನಾ ಕೈ ಹಾಕಿದ್ದು ಕಾಮಗಾರಿಗಳು ಆರಂಭಗೊಂಡಿದೆ.

ಇದು ನಿರ್ಮಾಣ ಆಗುತ್ತಿರುವುದಾದರೂ ಎಲ್ಲಿ.

ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದ ಲಿಝೌನಲ್ಲಿ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 30,000 ಜನರು ಇಲ್ಲಿ ವಾಸವಾಗುವಂತೆ ಈ ಸಿಟಿ ನಿರ್ಮಾಣವಾಗಲಿದೆ.

ಇದರ ವಿಶೇಷತೆ ಏನು ಗೊತ್ತಾ:- 100ಕ್ಕೂ ಅಧಿಕ ಜಾತಿಯ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿ ನೆಡಲು ಉದ್ದೇಶಿಸಲಾಗಿದೆ. ಈ ಎಲ್ಲ ಸಸಿಗಳು ಒಟ್ಟು 10,000 ಟನ್ಗತಳಷ್ಟು ಇಂಗಾಲದ ಡೈ ಆಕ್ಸೈಡ್ ಮತ್ತು 57 ಟನ್ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ವಾರ್ಷಿಕವಾಗಿ ಈ 10 ಲಕ್ಷ ಮರಗಳಿಂದ ಸುಮಾರು 900 ಟನ್ಗಳಳಷ್ಟು ಆಮ್ಲಜನಕ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಫಾರೆಸ್ಟ್ ಸಿಟಿಯಲ್ಲಿ ನಿರ್ಮಾಣವಾಗುವ ಮನೆಯಲ್ಲಿಯೂ ಮರಗಳನ್ನೂ ಬೆಳೆಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಿಟಿಯಲ್ಲಿ ವೇಗವಾಗಿ ಓಡುವ ರೈಲು, ಕಾರುಗಳು ಎಲ್ಲವೂ ಇರುತ್ತೆ. ಈ ನಗರದಲ್ಲಿ ವಿದ್ಯುತ್ಗೆ ಸೋಲಾರ್ ಶಕ್ತಿ ಬಳಕೆಯಾದರೆ ಜನರು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಿದ್ದಾರೆ.

ಒಟ್ಟಿನಲ್ಲಿ 175 ಹೆಕ್ಟೇರ್ ಪ್ರದೇಶದಲ್ಲಿ ಈ ಫಾರೆಸ್ಟ್ ಸಿಟಿಯನ್ನು ನಿರ್ಮಾಣವಾಗುತ್ತಿದ್ದು, ಈ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದೆ. ಪೂರ್ಣಗೊಂಡ ಬಳಿಕ ವಿಶ್ವದ ಮೊದಲ ಹಸಿರು ನಗರವನ್ನು ನಿರ್ಮಿಸಿದ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಲಿದೆ.