ದೇಶ-ವಿದೇಶ

ಇದು ಜಗತ್ತಿನ ಅತ್ಯಂತ ಸೋಮಾರಿ ರಾಷ್ಟ್ರ..! ಆ ರಾಷ್ಟ್ರ ಯಾವುದು ಗೊತ್ತಾ?

By admin

July 14, 2017

ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು  ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.

ಹೌದು, ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯವು, ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ಈ ಸೋಮಾರಿಗಳ ಪಟ್ಟಿಯಲ್ಲಿ ನಮ್ಮ ಭಾರತೀಯರೂ ಸಹ ಸೇರಿಕೊಂಡಿದ್ದಾರೆ. ಇಲ್ಲಿ ಓದಿ:-ಈ ಪುಟ್ಟ ದೇಶ ಏನೆಲ್ಲಾ ಮಾಡಿದೆ ಗೊತ್ತಾ..!

ಸೋಮಾರಿಗಳ ಪಟ್ಟಿಯಲ್ಲಿ ಭಾರತದ ಸ್ಥಾನ!

ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ. 49 ರಾಷ್ಟ್ರಗಳ ಅಧ್ಯಯನದಲ್ಲಿ ಭಾರತ 39 ನೇ ಸ್ಥಾನ ಪಡೆದಿದೆ. ಭಾರತೀಯರು ಪ್ರತಿದಿನ ಸರಾಸರಿ 4297 ಹೆಜ್ಜೆ ಇಡುತ್ತಾರೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.

ಜಗತ್ತಿನ ಅತ್ಯಂತ ಸೋಮಾರಿ ರಾಷ್ಟ್ರ 

ವಿಶ್ವದ ಅತ್ಯಂತ ಸೋಮಾರಿ ರಾಷ್ಟ್ರ ಇಂಡೋನೇಷ್ಯಾ ಆಗಿದ್ದು, ಕನಿಷ್ಠ ಸೋಮಾರಿತನವಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ವಿಶೇಷವಾಗಿ ಹಾಂಕ್ ಕಾಂಗ್ ನಲ್ಲಿರುವವರು ಹೆಚ್ಚು ಕ್ರಿಯಾಶೀಲರು ಎಂದು ಅಧ್ಯಯನ ವರದಿ ತಿಳಿಸಿದೆ. ಅಧ್ಯಯನ ವರದಿಗಾಗಿ ಸ್ಮಾರ್ಟ್ ಫೋನ್ ಆಕ್ಟಿವಿಟಿ ಮೂಲಕ ವಿಶ್ವದ 46 ರಾಷ್ಟ್ರಗಳಲ್ಲಿ 7,00,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು,  ಪ್ರತಿದಿನ ಸರಾಸರಿ 3513 ಹೆಜ್ಜೆ ಇಡುವ ಇಂಡೋನೇಷ್ಯಾದಲ್ಲಿರುವವರು ಹೆಚ್ಚು ಸೋಮಾರಿಗಳೆಂದು ಅಧ್ಯಯನ ವರದಿ ತಿಳಿಸಿದೆ.

ಹಾಂಕ್ ಕಾಂಗ್, ಚೀನಾ, ಉಕ್ರೇನ್, ಜಪಾನ್ ನಲ್ಲಿರುವ ಜನರು ಹೆಚ್ಚು ನಡೆಯುತ್ತಾರೆ, ಮಲೇಷ್ಯಾ, ಸೌದಿ ಅರೇಬಿಯಾ ಹಾಗೂ ಇಂಡೋನೇಷ್ಯಾ ಕಡಿಮೆ ನಡೆಯುತ್ತಾರೆ ಎಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ.