ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ.
ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ.
ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ ಲಭಿಸುತ್ತದೆ. ಹಾಗಾದರೆ ಈ ಸುದಿನ ನಾವು ಯಾವ ಪೂಜೆಗಳನ್ನು ಮಾಡಿದರೆ ಶ್ರೀರಾಮ ನಮ್ಮನ್ನು ಕಷ್ಟಗಳಿಂದ ಪಾರುಮಾಡಿ ನಮ್ಮ ಕುಟುಂಬಕ್ಕೆ ಸುಖ ಸಂತೋಷ ನೀಡುತ್ತಾನೆ ಎಂಬುದನ್ನು ನೋಡೋಣ…
ಮೊದಲು…
ಎಂದಿನಂತೆ ಇಂದು ಸಹ ಸ್ನಾನ ಮಾಡಿ ಮಾವಿನ ತೋರಣವನ್ನು ಮುಖ್ಯ ಹಾಗೂ ದೇವರ ಕೋಣೆಯ ಮುಂದೆ ಕಟ್ಟಿ, ತಲೆ ಸ್ನಾನ ಮಾಡಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಸೀತಾರಾಮನ ಪಟ್ಟಾಭಿಷೇಕದ ಪ್ರತಿಮೆ (ಪೋಟೋ) ವನ್ನು ಪೂಜಿಸಬೇಕು.
ಈ ದಿನ ಈ ಎಣ್ಣೆಯ ದೀಪಾರಾಧನೆ ಮುಖ್ಯ….
ಸಮಾನ್ಯವಾಗಿ ಯುಗಾದಿ ಹಿಂದೂ ಸಂವತ್ಸರದ ನಂತರ ನಡೆಸುವ ನವರಾತ್ರಿಗಳಲ್ಲಿ ಮೊದಲು ಬರುವ ಹಬ್ಬ ಶ್ರೀರಾಮ ನವಮಿ ಹಬ್ಬ ಹಾಗಾಗಿ ಈ ಹಬ್ಬದ ದಿನ ಆ ವರ್ಷವೆಲ್ಲ ಜೀವನದಲ್ಲಿ ಯಾವುದೇ ರೀತಿಯ ವಿಘ್ನಗಳು ಆಗದಿರಲೆಂದು ಕೊಬ್ಬರಿ ಎಣ್ಣೆಯಲ್ಲಿ ದೀಪಾರಾಧನೆ ಮಾಡಬೇಕು. ಹೀಗೆ ಮಾಡಿದರೆ ಅದು ಆ ಕುಟುಂಬಕ್ಕೆ ಹಾಗೂ ಮನೆಯ ಯಜಮಾನನಿಗೆ ಶುಭ, ಕ್ಷೇಮ, ಲಾಭ…
ಪೂಜೆಯ ಸಂದರ್ಭದಲ್ಲಿ…
ಪೂಜೆಯಲ್ಲಿ ಮುಂಚೆ ಶ್ರೀರಾಮನಿಗೆ ಮೊದಲು ಒಂದು ಪೀಠ ಹಾಕಿ ಅದನ್ನು ಅರಿಸಿಣ ಕುಂಕುಮದಿಂದ ಅಲಂಕಾರಿಸಿ, ಅಕ್ಕಿ ಹಾಕಿ ವೀಳ್ಯದೆಲೆ ಇಟ್ಟು ಅದರ ಮೇಲೆ ಸೀತಾರಾಮನ ಫೋಟೋ ಇಟ್ಟು ಪೂಜಿಸಬೇಕು.
ಪ್ರಸಾದ…
ರಾಮನಿಗೆ ಬೆಲ್ಲದ ಪಾನಕ ನೈವೇದ್ಯವಾಗಿಟ್ಟು ಅದನ್ನು ಪ್ರಸಾದವಾಗಿ ಎಲ್ಲರೂ ಸ್ವೀಕರಿಸಬೇಕು.