ರಾಜ್ಯ ಸಿಇಟಿ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ.
ಬಳಿಕ ಕೆಇಎ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 2, 3, 4, ರಂದು ಸಿಇಟಿ ಪರೀಕ್ಷೆಗಳು ನಡೆದಿದ್ದವು.
ಸುಮಾರು 1.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಇನ್ನು ಈ ಬಾರಿ ನೀಟ್ ಕಡ್ಡಾಯ ಹಿನ್ನಲೆಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಹೊರತುಪಡಿಸಿ ಎಂಜಿನಿಯರಿಂಗ್ ಕೋರ್ಸ್ ಸೇರಿದಂತೆ ಉಳಿದ ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸಿಇಟಿ ನಡೆದಿದ್ದು ಇದರ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಫಲಿತಾಂಶ 2017 ಆನ್ಲೈನ್ ಪರೀಕ್ಷಿಸಲು ಕ್ರಮಗಳು :-
- ಅಧಿಕೃತ ವೆಬ್ಸೈಟ್ಗಳಾದ Kea.kar.nic.in ಮತ್ತು Karresults.nic.in ಗೆ 11.00 ಕ್ಕೆ CET ಫಲಿತಾಂಶಗಳನ್ನು ಪರೀಕ್ಷಿಸಲು ಲಾಗ್ ಮಾಡಿ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ.
- ನಿಮ್ಮ ಕರ್ನಾಟಕ ಸಿಇಟಿ 2017 ಸ್ಕೋರ್ ಪರಿಶೀಲಿಸಿ.
- ಪಿಡಿಎಫ್ ನಕಲನ್ನು ನಿಮ್ಮ ಫಲಿತಾಂಶದ PDF ನಕಲನ್ನು ಉಳಿಸಿ ಮತ್ತು ಡೌನ್ಲೋಡ್ ಮಾಡಿ ಮತ್ತು ಅದನ್ನು ಮುದ್ರಿಸಿ.