ಜಯಂತಿಗಳು

ಇಂದು ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…ಗಾಂಧಿ ಜಯಂತಿ ಸ್ವಾತಂತ್ರಕ್ಕೆ ಮುಂಚೆ ಆಚರಿಸಲಾಗಿತ್ತು!ಯಾವಾಗ ಗೊತ್ತಾ..?

By admin

October 02, 2017

ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ ಶಾಂತಿ ಪ್ರವರ್ತಕ ಮಹಾತ್ಮಾ ಗಾಂಧಿ. ಗುಜರಾತ್ ನ ಪೋರ್ ಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯಾಗಿ ಜನಿಸಿ, ವಿದೇಶದಲ್ಲಿ ಕಾನೂನು ಪದವಿ ಪಡೆದು ದಕ್ಷಿಣ ಭಾರತದಲ್ಲೇ ಹೋರಾಟ ಆರಂಭಿಸಿ ಭಾರತಕ್ಕೆ ಬಂದರು. ಶಾಂತಿ ಮಂತ್ರದಿಂದಲೇ ಭಾರತವನ್ನು ಬಂಧಮುಕ್ತಗೊಳಿಸಿದ ಅಹಿಂಸಾವಾದಿಯ ಹುಟ್ಟು ಹಬ್ಬವನ್ನು “ಗಾಂಧೀ ಜಯಂತಿಯಾಗಿ” ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಗಾಂಧಿ ಜಯಂತಿ ರಾಷ್ಟ್ರೀಯ ಆಚರಣೆಯಾಗಿ ಆರಂಭವಾಗಿದ್ದು ಯಾವಾಗ ಗೊತ್ತಾ?

ಈ  ಪ್ರಶ್ನೆಗೆ 1987, 1948 ಅಥವಾ 1950… ಎಂದು ಬಹುತೇಕ ಜನರು ಉತ್ತರಿಸುತ್ತಾರೆ. ಮಹಾತ್ಮ ಗಾಂಧಿ ಚಿತ್ರಕ್ಕೆ  ಹಾರ ಹಾಕಿ ಮಾಡುವ ಭಾಷಣಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಆಡಿದ ಮಾತುಗಳನ್ನು ಮತ್ತೆ ಉಚ್ಚರಿಸಲಾಗುತ್ತದೆ. ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವುದು ಅತ್ಯಗತ್ಯವೆಂದು ಎಲ್ಲರೂ ಹೇಳುತ್ತಾರೆ. ಆಚ್ಚರ್ಯವೆಂದರೆ  ಸ್ವಾತಂತ್ರ್ಯ ದೊರೆಯುವುದಕ್ಕೆ  ಮುನ್ನವೇ ಗಾಂಧಿ ಜಯಂತಿ ಆಚರಣೆ ನಮ್ಮ ದೇಶದಲ್ಲಿ ನಡೆದಿದೆ!

1930–-33 ಸಮಯದಲ್ಲಿ ಉತ್ತರ ಕನ್ನಡದ ಶಿರಸಿ–-ಸಿದ್ದಾಪುರಗಳಿಂದ ಪ್ರಕಟವಾಗುತ್ತಿದ್ದ ‘ಸತ್ಯಾಗ್ರಹ’ ಕರಪತ್ರ ಪತ್ರಿಕೆಯಲ್ಲಿ ಗಾಂಧಿ ಜಯಂತಿಯ ಸಾಕಷ್ಟು ವಿವರಗಳಿವೆ. 1931ರಲ್ಲಿ ಪ್ರಕಟವಾದ ಒಂದು ಸಂಚಿಕೆಯಲ್ಲಂತೂ ಗಾಂಧಿ ಜಯಂತಿ ಸಪ್ತಾಹ ದೇಶಾದ್ಯಂತ ಆಚರಿಸಲು ‘ರಾಷ್ಟ್ರಪತಿ’ ಸರ್ದಾರ್ ವಲ್ಲಭಭಾಯಿ ಪಟೇಲರ ಅಪ್ಪಣೆಯ ಪ್ರಸ್ತಾಪವಿದೆ!

ಭಾರತದ ಅಮೂಲ್ಯ ರತ್ನ – “ಲಾಲ್ ಬಹದ್ದೂರ್ ಶಾಸ್ತ್ರಿ” :-

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ.ಲಾಲ್ ಬಹದ್ದೂರ್ ಶಾಸ್ತ್ರಿ. ಇಂದು (ಅಕ್ಟೋಬರ್ 2) ಅವರ 108ನೇ ಜನ್ಮದಿನ.

“We would prefer to live in poverty for as long as necessary but we shall not allow our freedom to be subverted” ಎಂದಿದ್ದರು ಶಾಸ್ತ್ರಿ.

ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಸರಳ ಜೀವಿ , ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜಯಂತಿಯ ಶುಭಾಶಯಗಳು ?? ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಜೈ ಹಿಂದ್. ಜೈ ಜವಾನ್, ಜೈ ಕಿಸಾನ್.