ಷಿಫಾಲಿ ಎಂಬ ಯುವತಿ ಆ ರೀತಿ ಇದ್ದ ಯುವತಿ…ಈಗ ಈ ರೀತಿ ಯಾಕೆ ಆದಳೆಂದರೆ ಅದಕ್ಕೆ ಕಾರಣ ದೀಕ್ಷೆಯೊಂದನ್ನು ಕೈಗೊಂಡಿದ್ದು..! ಗುಜರಾತ್‌ನಲ್ಲಿನ ವಡೋದರ ವ್ಯಾಪ್ತಿಯಲ್ಲಿನ ನಿಜಾಮ್ ಪುರಾ ಮೂಲದ ಯುವತಿ. ಈ ಎರಡೂ ಫೋಟೋಗಳಲ್ಲೂ ಇರುವ ಯುವತಿ ಒಬ್ಬರೇ…
ವಸಂತ ಪಂಚಮಿ ಸಂದರ್ಭದಲ್ಲಿ ನಿಜಾಂಪೂರ್ ಜೈನ ಸಂಘದ ನೇತೃತ್ವದಲ್ಲಿ ಅತ್ಯಂತ ಕ್ಲಿಷ್ಟಕರವಾದ ಜೈನ ದೀಕ್ಷೆಯನ್ನು ಸ್ವೀಕರಿಸಿದರು. ನೂರಾರು ಮಂದಿ ಜೈನರು ಹಾಜರಾಗಿದ್ದಾಗ, ಆಕೆ ದೀಕ್ಷೆ ಸ್ವೀಕರಿಸಿದರು.
ಅದಕ್ಕೂ ಮುನ್ನ ಆಕೆ, ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ, ಕೊನೆಯದಾಗಿ ಮೇಕಪ್‌ನಲ್ಲಿ ಒಂದು ಫೋಟೋ ಸೆಷನ್ ಮಾಡಿಸಿಕೊಂಡಳು.
ದೀಕ್ಷೆ ಸ್ವೀಕರಿಸುವ ಮುನ್ನ ಷಿಫಾಲಿ ಮೇಕಪ್‍ನಿಂದ ಕೂಡಿದ ಫೋಟೋ ಶೂಟ್ ಮಾಡಿಸಿದರು. ಅತ್ಯಂತ ಕಠಿಣವಾದ ದೀಕ್ಷೆಗಳಲ್ಲಿ ಜೈನ ದೀಕ್ಷೆ ಸಹ ಒಂದು. ಅದರ ಭಾಗವಾಗಿಯೇ ಷಿಫಾಲಿ ತನ್ನ ಕೂದಲನ್ನು ತೆಗೆಸಿ ಈ ರೀತಿ ಕಾಣಿಸಿದಳು.
ಆ ಬಳಿಕ ತಲೆ ಬೋಳಿಸಿಕೊಂಡಳು, ಬಿಳಿ ವಸ್ತ್ರ ಸುತ್ತಿಕೊಂಡು ಸಂನ್ಯಾಸಿಯಂತೆ ಬದಲಾಗಿ ದೀಕ್ಷೆ ಸ್ವೀಕರಿದಳು. ಷಿಫಾಲಿ ತಂದೆ ಕೆಲವು ವರ್ಷಗಳ ಹಿಂದೆಯೇ ಮರಣಿಸಿದಿದ್ದರೂ, ಅಂದಿನಿಂದ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಕೆ ತೆಗೆದುಕೊಂಡ ನಿರ್ಧಾರಕ್ಕೆ ಕುಟುಂಬಿಕರೆಲ್ಲಾ ಬೆಂಬಲ ಸೂಚಿಸಿದ್ದಾರೆ.