ವೈದ್ಯರನ್ನು ದೂರವಿಡಲು ಈ ಹಣ್ಣುಗಳನ್ನು ಸೇವಿಸಿ, ಎಷ್ಟೋಂದು ಹಣ್ಣುಗಳು ಅಬ್ಬ! ತಿನ್ನಬೇಕು ಎಲ್ಲಾ ಫ್ರೂಟ್: ಆರೋಗ್ಯಕ್ಕಾಗಿ ಹಣ್ಣು ತಿನ್ನಿ ಆನಂದಕ್ಕಾಗಿ ಹಣ್ಣು ತಿನ್ನಿ ಪೌಷ್ಟಿಕ ಭದ್ರತೆಗೂ ಹಣ್ಣು ತಿನ್ನಿ…
ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ.. ರುಚಿ ರುಚಿಯಾದ ರಸಭರಿತ ಹಣ್ಣುಗಳನ್ನು ಮೆಲ್ಲುವುದೇ ಒಂದು ಸುಖ. ಆದರೆ, ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ, ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹಣ್ಣುಗಳನ್ನು ತಿನ್ನಲೂ ಕ್ರಮವಿದೆ. ಊಟ ಅಥವಾ ತಿಂಡಿ ತಿನ್ನಲು ಅರ್ಧಗಂಟೆಯ ಮೊದಲು ಹಣ್ಣು ತಿನ್ನಬೇಕು. ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನಬಾರದು. ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
- ವೈದ್ಯರ ದೂರವಿಡಲು ಸೇಬುಹಣ್ಣು
- ಮಧುಮೇಹ ದೂರಾಗಲು ನೇರಳೆಹಣ್ಣು
- ಸುಲಭವಾಗಿ ಪಚನವಾಗಲು ಬಾಳೆಹಣ್ಣು
- ಶಕ್ತಿಯ ಆಗರ ಹಲಸಿನ ಹಣ್ಣು
- ರೋಗನಿರೋಧಿಸಲು ಕಿತ್ತಳೆ ಹಣ್ಣು
- ಬರಗಾಲದಲ್ಲೂ ಬೆಳೆವುದು ಸೀತಾಫಲ
- ಬೇಸಿಗೆಯಲಿ ಬೇಕಾಗುವ ಕಲ್ಲಂಗಡಿ ಹಣ್ಣು
- ವೈನು ಮಾಡಲು ಬೇಕು ದ್ರಾಕ್ಷಿಹಣ್ಣು
- ಜೆಲ್ಲಿಗೆ ಅತಿ ಸೂಕ್ತ ಸೀಬೇಹಣ್ಣು
- ಜಾಮ್ ಮಾಡಲು ಅನಾನಸು
- ತಿನ್ನಲು ಬಲು ಸಿಹಿ ಚಿಕ್ಕು ಹಣ್ಣು
- ದುಡ್ಡುಮಾಡಲು ದಾಳಿಂಬೆಹಣ್ಣು
- ದೃಷ್ಟಿ ಚೆನ್ನಾಗಿರಲು ಪರಂಗಿಹಣ್ಣು
- ಸಿಕ್ಕಿದರೆ ತಿನ್ನಬಹುದಾದ ಈಚಲಣ್ಣು
- ಬಿಸಿಲಿಗೂ ಜಗ್ಗದ ಬೋರೆಹಣ್ಣು
ತಿನ್ನಬೇಕು ಎಲ್ಲಾ ಫ್ರೂಟ್, ಆರೋಗ್ಯಕ್ಕಾಗಿ ಹಣ್ಣು ತಿನ್ನಿ ಆನಂದಕ್ಕಾಗಿ ಹಣ್ಣು ತಿನ್ನಿ ಪೌಷ್ಟಿಕ ಭದ್ರತೆಗೂ ಹಣ್ಣು ತಿನ್ನಿ…