ಆಲೂಗಡ್ಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು:-
ಆಲೂಗಡ್ಡೆ – 1 ದೊಡ್ಡ ಆಲೂಗಡ್ಡೆ
ಮೈದ ಹಿಟ್ಟು – 1 ಕಪ್
ಹಸಿಮೆಣಸು – 1-2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ತಯಾರಿಸುವ ವಿಧಾನ:-
ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ತುರಿಯಿರಿ . ಅದಕ್ಕೆ ಮೈದ ಹಿಟ್ಟು ಸೇರಿಸಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಸಿಮೆಣಸು , ಕೊತ್ತಂಬರಿ ಸೊಪ್ಪನು ಸಣ್ಣದಾಗಿ ಹೆಚ್ಚಿ ಹಿಟ್ಟಿಗೆ ಸೇರಿಸಿ. ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ದೋಸೆ ಕಾವಲಿಗೆಯನ್ನು ಬಿಸಿ ಮಾಡಲು ಇಡಿ, ಅದಕ್ಕೆ ತುಪ್ಪ, ಇಲ್ಲವೆ ಎಣ್ಣೆ ಹಾಕಿ ಸವರಬೇಕು, ನಂತರ ದೋಸೆ ಹಿಟ್ಟನ್ನು ಕಾವಲಿಗೆ ಮೇಲೆ ಹದವಾಗಿ ಎರೆಯಿರಿ. ಉರಿಯನ್ನು ಸಣ್ಣದಾಗಿರಿಸಿ. ದೋಸೆ ಒಂದು ಬದಿ ಕಾದ ಮೇಲೆ ಇನ್ನೊಂದು ಬದಿಗೆ ತಿರುವಿ ಹಾಕಿ. ಈಗ ಬಿಸಿ ಬಿಸಿ ಆಲೂಗಡ್ಡೆ ದೋಸೆ ಸವಿಯಲು ಸಿದ್ಧ.
ಸೂಚನೆ: ಒಂದು ವೇಳೆ ಕುರುಕುರು (crispy) ದೋಸೆ ಬೇಕಾದಲ್ಲಿ 3-4 ನಿಮಿಷ ಬೇಯಿಸಿ.