ಉಪಯುಕ್ತ ಮಾಹಿತಿ

ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು..?ಅದಕ್ಕೆ ಇಲ್ಲಿದೆ ಪರಿಹಾರ…

By admin

January 29, 2018

ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.

ಆದರೆ ಇನ್ನು ಮುಂದೆ ಆಲೂಗಡ್ಡೆ ಒಡೆಯದೆ ಇರುವ ಹಾಗೆ ಬೇಯಿಸಲು ಹೀಗೆ ಮಾಡಿ…

* ನಾಲ್ಕೈದು ಆಲೂಗಡ್ಡೆಯನ್ನು ಬೇಯಿಸುವಾಗ ತುಂಬಾ ನೀರು ಹಾಕುವ ಅವಶ್ಯಕತೆಯಿಲ್ಲ.

* ಆಲೂಗಡ್ಡೆ ನೀರಿನಲ್ಲಿ ಮುಳುಗುವಷ್ಟು ನೀರನ್ನು ಮಾತ್ರ ಹಾಕಿ.

* ಆಲೂಗಡ್ಡೆ ಬೇಯಿಸುವ ನೀರಿಗೆ ಚಿಟಕಿ ಉಪ್ಪನ್ನು ಹಾಕಿ. ಇದ್ರಿಂದ ಆಲೂಗಡ್ಡೆ ಒಡೆಯುವುದಿಲ್ಲ. ಜೊತೆಗೆ ಮೃದುವಾಗಿ ಬೇಯುತ್ತದೆ.

*ಉಪ್ಪಿನ ಜೊತೆಗೆ ಎಣ್ಣೆ ಹಾಕುವುದು ಇನ್ನಷ್ಟು ಉತ್ತಮ.

* ಮನೆಯಲ್ಲಿ ವಿನೆಗರ್ ಇದ್ರೆ ಅದನ್ನು ಬಳಸಬಹುದು. ವಿನೆಗರ್ ಹಾಕುವುದ್ರಿಂದ ಆಲೂಗಡ್ಡೆ ಬಿರುಕು ಬಿಡುವುದಿಲ್ಲ.