ಆರೋಗ್ಯ

ಆರೋಗ್ಯ ಸಂಜೀವಿನಿ ಈರುಳ್ಳಿಯ ಈ ಉಪಯೋಗಗಳನ್ನು ಕೇಳಿದ್ರೆ ಶಾಕ್ ಆಗ್ತೀರಾ..!

By admin

February 09, 2018

ಈರುಳ್ಳಿಯನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಮೂಳೆಗಳು, ನರಗಳು ದೃಢವಾಗಿರುತ್ತವೆಯಂತೆ. ಎರಡೂ ಹೊತ್ತಿನ ಊಟದಲ್ಲಿ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ನಿತ್ಯ ಆರೋಗ್ಯವಂತರಾಗಿ ಮುಂದುವರೆಯುತ್ತಾರೆ. ಈರುಳ್ಳಿ ಯನ್ನು ಉಪಯೋಗಿಸುವುದರಿಂದ ಒಳ್ಳೆಯ ಜ್ಞಾಪಕ ಶಕ್ತಿ ಮತ್ತು ಬಲವಾದ ನಾಡಿ ವ್ಯವಸ್ಥೆ ಉಂಟಾಗುತ್ತದೆ. ಇದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುವುದು.

 

ಈರುಳ್ಳಿಯನ್ನು ಮಜ್ಜಿಗೆ ಅಥವಾ ಮೊಸರಿನಲ್ಲಿ ಬೆರೆಸಿ ಸೇವಿಸಿದರೆ ಶರೀರಕ್ಕೆ ಸಂಪೂರ್ಣ ಆರೋಗ್ಯ ನೀಡುವ ಹಲವು ಪೋಷಕಾಂಶಗಳು ಸಿಗುವುದು ಎಂದು ಸಂಶೋಧನೆ ತಿಳಿದು ಬಂದಿದೆ.  ಈರುಳ್ಳಿಯಲ್ಲಿ ಯಾಂಟಿಬಯೋಟಿಕ್, ಯಾಂಟಿ ಸೆಪ್ಟಿಕ್, ಯಾಂಟಿ ಮೈಕ್ರೋಬಿಯಾಲ್ ಲಕ್ಷಣಗಳು ಇರುವುದರಿಂದ ಸೋಂಕು ಬರದಂತೆ ರಕ್ಷಿಸುತ್ತದೆ. ಈರುಳ್ಳಿ ದೇಹದಲ್ಲಿ ಇನ್ಸುಲಿನ್ ಹಂತವನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿ ಸಕ್ಕರೆ ಹಂತವನ್ನು ನಿಯಂತ್ರಿಸುವುದರ ಮೂಲಕ ಮಧುಮೇಹ ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ.

ಈರುಳ್ಳಿಯಲ್ಲಿ ಸಲ್ಫರ್, ಫೈಬರ್, ಪೊಟಾಷಿಯಂ, ವಿಟಮಿನ್ ಬಿ, ವಿಟಮಿನ್ ಸಿ ಯಥೇಚ್ಛವಾಗಿರುತ್ತವೆ. ಹಾಗೆಯೇ ಕೊಬ್ಬು, ಕೊಲೆಸ್ಟ್ರಾಲ್ ಇರುತ್ತದೆ. ಈರುಳ್ಳಿ ರಸ ಮತ್ತು ಜೇನು ತುಪ್ಪದ ಮಿಶ್ರಣವನ್ನು ತೆಗೆದುಕೊಂಡರೆ ಜ್ವರ, ಸಾಧಾರಣ ನೆಗಡಿ, ಕೆಮ್ಮು, ಗಂಟಲು ನೋವು, ಅಲರ್ಜಿಯಂತಹ ಸಮಸ್ಯೆಗಳು ತಕ್ಷಣ ಉಪಶಮನವಾಗುತ್ತದೆ.ಈರುಳ್ಳಿ ರಸವನ್ನು ಕಿವಿ ಮತ್ತು ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸಲುಉಪಯೋಗಿಸುತ್ತಾರೆ. ಹಲ್ಲು ನೋವು ಮತ್ತು ಹುಳುಕು ಹಲ್ಲಿನ ನೋವು ನಿವಾರಣೆಗೆ ಈರುಳ್ಳಿ ರಸವನ್ನು ಉಪಯೋಗಿಸುತ್ತಾರೆ.

ಇಲ್ಲಿ ಓದಿ :-ಈರುಳ್ಳಿ ಸಿಪ್ಪೆ ಬಿಸಾಡ್ತೀರಾ..?ಹಾಗೆ ಮಾಡಬೇಡಿ..!ಏಕೆ ಗೊತ್ತಾ..?

ಈರುಳ್ಳಿಯನ್ನು ವಾಸನೆ ಸೇವನೆಯಿಂದ ಮೂಗಿನಿಂದ ಬರುವ ರಕ್ತಸ್ರಾವವನ್ನು ನಿಲ್ಲಿಸಬಹುದು ಅಥವಾ ಅತಿಯಾಗಿ ರಕ್ತ ಸೋರುವುದನ್ನು ಕಡಿಮೆ ಮಾಡಬಹುದು. ಈರುಳ್ಳಿ ನಿದ್ರಾಹೀನತೆ ಅಥವಾ ನಿದ್ರೆ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ತಪ್ಪದೆ ಒಳ್ಳೆಯ ನಿದ್ರೆಯನ್ನು ತರುತ್ತದೆ. ಜೀರ್ಣಕ್ರಿಯೆಯ ಸಮಸ್ಯೆಗಳಿದ್ದಲ್ಲಿ ಈರುಳ್ಳಿಯನ್ನು ತಿಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೀರ್ಣ ರಸಗಳ ಉತ್ಪತ್ತಿಗೆ ಸಹಾಯವಾಗುತ್ತದೆ.

ಈರುಳ್ಳಿ ರಸವನ್ನು ಸುಟ್ಟು ಚರ್ಮ ಅಥವಾ ಕ್ರಿಮಿಗಳ ಕಡಿತ ಅಥವಾ ಜೇನು ನೊಣಗಳ ಕಡಿತವನ್ನು ಗುಣಪಡಿಸುವಲ್ಲಿ ಸಹಾಯವಾಗುತ್ತದೆ. ಪ್ರತಿದಿನ ಈರುಳ್ಳಿ ತಿಂದರೆ ಹೃದಯ ಖಾಯಿಲೆಗೆ ಕಾರಣವಾದ ಕೆಟ್ಟ ಕೊಲೆಸ್ಟ್ರಾಲ್ ನಶಿಸುತ್ತದೆ. ಅಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಕೊರೋನರೀ ಖಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಕೀಲುಗಳಲ್ಲಿ ಅರ್ಥರೈಟಿಸ್ ಕಡಿಮೆ ಮಾಡಲು ಈರುಳ್ಳಿ ಸಹಾಯವಾಗುತ್ತದೆ.