(Tóquio - Japão, 23/10/2019) Reunião Bilateral com o Príncipe Charles. Foto: José Dias/PR

ಆಯುರ್ವೇದ

ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ

By admin

April 03, 2020

ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.

ಸೌಖ್ಯ

ಮಾರಕ ಕರೊನಾ ವೈರಸ್​ ಸೋಂಕಿಗೆ ಔಷಧ ಕಂಡುಹಿಡಿಯಲು ವಿಶ್ವದ ಎಲ್ಲ ಪ್ರಯೋಗಾಲಯಗಳಲ್ಲಿ ಪ್ರಯೋಗಗಳು ಭರದಿಂದ ಸಾಗುತ್ತಿವೆ. ಇಂಥ ಸಂದರ್ಭದಲ್ಲೇ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಪಡೆಯುವ ಮೂಲಕ ಬ್ರಿಟನ್​ನ ರಾಜ ಚಾರ್ಲ್ಸ್​ ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ವೈದ್ಯರು ಬೆಂಗಳೂರಿನಿಂದಲೇ ಈ ಚಿಕಿತ್ಸೆ ನೀಡಿದ್ದಾರೆ ಎಂಬುದು ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಕೇಂದ್ರದ ಆಯುಷ್​ನ ರಾಜ್ಯ ಸಚಿವ ಶ್ರೀಪಾದ್​ ನಾಯಕ್​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸೌಖ್ಯ ಎಂಬ ಆಯುರ್ವೇದ ರೆಸಾಟ್​ ನಡೆಸುತ್ತಿರುವ ಡಾ. ಐಸಾಕ್​ ಮಥಾಯ್​ ಈ ವಿಷಯವನ್ನು ತಮಗೆ ತಿಳಿಸಿದ್ದಾಗಿ ಶ್ರೀಪಾದ್​ ನಾಯಕ್​ ಗುರುವಾರ ಹೇಳಿದ್ದಾರೆ

ಆಯುರ್ವೇದ food

ಬ್ರಿಟನ್​ನ 71 ವರ್ಷ ವಯಸ್ಸಿನ ರಾಜ ಚಾರ್ಲ್ಸ್​ ಅವರಲ್ಲಿ ಕೆಲದಿನಗಳ ಹಿಂದೆ ಕರೊನಾ ವೈರಸ್​ ಸೋಂಕಿನ ಲಕ್ಷಣ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಕಾಟ್​ಲೆಂಡ್​ನಲ್ಲಿ ಸ್ವತಃ ಕ್ವಾರಂಟೈನ್​ಗೆ ಒಳಗಾಗಿದ್ದರು. ಇವರ ಪತ್ನಿ ಕ್ಯಾಮೆಲಾ ಅವರನ್ನು ಕೂಡ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಆದರೆ, ಇವರಲ್ಲಿ ಸೋಂಕು ಕಂಡುಬಂದಿರಲಿಲ್ಲ. ಆದರೆ ರಾಜ ಚಾರ್ಲ್ಸ್​ ಅವರಿಗೆ ಕರೊನಾ ವೈರಸ್​ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಿಂದ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಪಡೆದುಕೊಂಡರು ಎನ್ನಲಾಗಿದೆ.

ಇದೀಗ ರಾಜ ಚಾರ್ಲ್ಸ್​ ಅವರಿಗೆ ಕೊಟ್ಟಿರುವ ಚಿಕಿತ್ಸೆಯ ವಿವರವನ್ನು ಡಾ. ಐಸಾಕ್​ ಮಥಾಯ್​ ಅವರಿಂದ ಪಡೆದುಕೊಳ್ಳಲಾಗುತ್ತಿದೆ. ಈ ಚಿಕಿತ್ಸೆಯ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಶ್ರೀಪಾದ್​ ನಾಯಕ್​ ತಿಳಿಸಿದ್ದಾರೆ.