ಆರೋಗ್ಯ

ಆಯುರ್ವೇದ ಪ್ರಕಾರ ಈರುಳ್ಳಿ ಮತ್ತು ಬೆಲ್ಲ ಡೆಂಘಿ ಜ್ವರಕ್ಕೆ ಒಂದು ರಾಮಭಾಣವಂತೆ..? ಹೇಗೆಂದು ತಿಳಿಯಲು ಇದನ್ನು ಓದಿ…

By admin

February 07, 2018

ಆಯುರ್ವೇದದಲ್ಲಿ ಹೇಳಿರುವಂತೆ ಹಲವು ರೋಗಗಳಿಗೆ ಹಲವು ರೀತಿಯ ಮದ್ದುಗಳನ್ನು ನೀಡಲಾಗಿದೆ. ಆದ್ರೆ ರೀತಿಯಾಗಿ ಡೆಂಘಿ ಜ್ವರಕ್ಕೆ ಒಂದು ರಾಮಭಾಣವಾಗಿ ಈ ಬೆಲ್ಲ ಮತ್ತು ಈರುಳ್ಳಿ ಸಹಾಯವಾಗಿದೆ. ಇದಕ್ಕೆ ಉದಾಹರಣೆಯಾಗಿ  ಆರೋಗ್ಯ ಇಲಾಖೆಯ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವುದರಿಂದ ಡೆಂಘಿ ಜ್ವರದ ನಿಯಂತ್ರಣ ಮಾಡಬಹುದು ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಖಾತೆಯಿಂದ ಬಹಿರಂಗ ಪಡಿಸಲಾಗಿದೆ.

ಆಯುರ್ವೇದ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದ ನಂತರ ಬಂದಿರುವ ಫ‌ಲಿತಾಂಶದ ಆಧಾರದಲ್ಲಿ ಆರೋಗ್ಯ ಇಲಾಖೆ ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಆಯುಷ್‌ ಇಲಾಖೆಯು ಡೆಂಘಿ ಜ್ವರದ ಬಗ್ಗೆ ಹೊರಡಿಸಿರುವ ಮಾಹಿತಿ ಪತ್ರದಲ್ಲಿ, ಡೆಂಘಿ ಜ್ವರಕ್ಕೆ ಮನೆಯ ಸುತ್ತಮುತ್ತಲು ಬೆಳೆಯುವ ಗಿಡಮೂಲೀಕೆಗಳಿಂದಲೇ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ಆಯುರ್ವೇದ ಔಷಧವೇ ಉತ್ತಮ ಮತ್ತು ಜನರು ಸುಲಭವಾಗಿ ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ನಿತ್ಯವೂ ಹೊಸ ಸಂಶೋಧನೆಗೆ ಮುಂದಾಗುತ್ತಿದೆ. ಈಗಲೂ ಅದನ್ನೇ ಅನುಸರಿಸುವುದು ತಪ್ಪಲ್ಲ ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವು ದರಿಂದ ಡೆಂಘಿ ಜ್ವರ ನಿಯಂತ್ರಣ ಮಾಡಬಹುದು ಎಂದು ಹೇಳಿದ್ದಾರೆ.