ಸುದ್ದಿ

ಆನ್‌ ಲೈನ್‌ ವ್ಯಾಪಾರಕ್ಕೆ ಬೀಳಲಿದೆಯಾ ಬ್ರೇಕ್…?

By admin

September 09, 2019

ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ.

ಇ-ಕಾಮರ್ಸ್ ಕಂಪನಿಗಳು ಕೇವಲ ಆನ್‌ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ ಮಾರುವಂತಿಲ್ಲ. ಆದರೆ ವಿದೇಶಿ ನೇರ ಬಂಡವಾಳ ಹೂಡಿಕೆಯ(ಎಫ್‌ಡಿಐ) ಈ ನಿಯಮ ಗಾಳಿಗೆ ತೂರಿ ಕಂಪನಿಗಳು ಮನಸೋಇಚ್ಛೆ ದರ ನಿಗದಿಪಡಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ಈ ಕಂಪನಿಗಳು ಗೋದಾಮಿನಲ್ಲಿ ಸರಕನ್ನು ಸಂಗ್ರಹಿಸುತ್ತಿವೆ. ಜೊತೆಗೆ ಕ್ಯಾಶ್ ಬ್ಯಾಕ್ ಯೋಜನೆಗಳಿಂದಲೂ ತಮಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.