ಜೆಡಿಎಸ್ ನ ಶಾಸಕರಾಗಿದ್ದ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಜಮೀರ್ ಅಹ್ಮದ್ ಖಾನ್, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ ಮತ್ತು ಭೀಮಾ ನಾಯ್ಕ್ ಪಕ್ಷದಲ್ಲಿಯೇ ಸಂಚಲನ ಸೃಷ್ಟಿಸುವುದರ ಮೂಲಕ ಪಕ್ಷದ ದೋರಣೆಗೆ ಗುರಿಯಾಗಿದ್ದರು.
ಅಡ್ಡಮತದಾನ ಮಾಡಿರುವ ಏಳು ಮಂದಿ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಅದೇಶಿಸುವಂತೆ ಕೋರಿ ಜೆಡಿಎಸ್ನ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಮೂಡಿಗೆರೆಯ ಬಿ.ವಿ ನಿಂಗಯ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ 2016ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆ ವೇಳೆ ಜೆಡಿಎಸ್ನ ವಿಪ್ ಉಲ್ಲಂಘಿಸಿ ಕಾಂಗ್ರೆಸ್ಗೆ ಮತ ನೀಡಿದ್ದ ಪಕ್ಷದ ಶಾಸಕರ ವಿರುದ್ಧ ಜೆಡಿಎಸ್ ಸಲ್ಲಿಸಿದ್ದ ಅನರ್ಹತೆ ಪ್ರಕರಣದ ತೀರ್ಪನ್ನು ನಾಳೆಯೇ ಪ್ರಕಟಿಸುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್ಗೆ ಹೈಕೋರ್ಟ್ ಮಂಗಳವಾರ ಮಹತ್ವದ ನಿರ್ದೇಶನ ನೀಡಿದೆ.
ಇನ್ನು ಈ ಪ್ರಕರಣದ ಅರ್ಜಿಯು ಮಂಗಳವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಏಳು ಶಾಸಕರ ಅನರ್ಹತೆ ಪ್ರಕರಣದಲ್ಲಿ ವಿಧಾನಸಭೆ ಸ್ಪೀಕರ್ ಅವರಿಂದ ಇನ್ನಷ್ಟೇ ಪ್ರಕಟವಾಗಬೇಕಿರುವ ತೀರ್ಪನ್ನು ನಾಳೆಯೇ ಅಂದರೆ ಏ.21ರಂದೇ ಪ್ರಕಟಿಸುವಂತೆ ಹೈಕೋರ್ಟ್ ಸೂಚಿಸಿತು.
ಇನ್ನು ಈ ಹಿನ್ನೆಲೆಯಲ್ಲಿ ರೆಬೆಲ್ ಶಾಸಕರು ಆತಂಕಕ್ಕೆ ಒಳಗಾಗಿದ್ದಾರೆ.ಇನ್ನು ಕೇವಲ ಇಷ್ಟೇ ಅಲ್ಲದೆ ಈ ಶಾಸಕರು ಬರುವ ವಿಧಾನಸಭಾ ಚುನಾವಣೆಯ ರಾಜಕೀಯ ನಿರ್ಧಾರವು ಕೂಡ ಮುಖ್ಯವಾಗಲಿದೆ. ಎತ್ತ ಕಾಂಗ್ರೆಸ್ ಕಡೆ ಒಲವು ತೋರಿಸಿರುವ ಶಾಸಕರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಟಿಕೆಟ್ ಬಗ್ಗೆಯೂ ಕೂಡ ಶಾಸಕರಿಗೆ ತಲೆ ಬಿಸಿಯಾಗಿದೆ.