ಸುದ್ದಿ

ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ…!

By admin

September 04, 2019

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಅವರ ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತ ತಂಡದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ. 

ವೆಸ್ಟ್‌ಇಂಡೀಸ್ ಪ್ರವಾಸದ ವೇಳೆಯಲ್ಲಿ ಜಮೈಕಾದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಯಲ್ಲಿರುವಾಗ ಅಚಾನಕ್ ಆಗಿ ಬಾಲಕನ ಭೇಟಿಯಾದರು. ಈ ಸಂದರ್ಭದಲ್ಲಿ ಬಾಲಕನೇ ನನ್ನ ಆಟೋಗ್ರಾಫ್ ಪಡೆಯುವೀರಾ ಎಂದು ವಿರಾಟ್ ಕೊಹ್ಲಿರನ್ನು ಪ್ರಶ್ನಿಸಿದರು. 

ಬಾಲಕನ ಪ್ರಶ್ನೆಯಿಂದ ಅಚ್ಚರಿಗೊಂಡರೂ ನಗುಮುಖದಿಂದಲೇ ಬಹಳ ತಾಳ್ಮೆಯಿಂದ ಆಟೋಗ್ರಾಫ್ ಪಡೆಯುವ ಮೂಲಕ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ. 

ಇದಕ್ಕೂ ಮೊದಲು ವೆಸ್ಟ್‌ಇಂಡೀಸ್ ಸರಣಿ ನಡುವೆ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುವ ಮೂಲಕ ವಿರಾಟ್ ಕೊಹ್ಲಿ ಹೃದಯ ಗೆದ್ದಿದ್ದರು. ಅಂದ ಹಾಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ2-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿದೆ.