ನಟ “ಸುದೀಪ್”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್‌ರವರು ಟ್ವಿಟ್ಟರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಇನ್ನೊಂದು ಪ್ರಮುಖ ವಿಷಯವೇನೆಂದರೆ, ಸುದೀಪ್‌ಗೆ ಈಗ ಹೈದರಾಬಾದ್‌ನಲ್ಲೂ “ಅಭಿಮಾನಿ ಸಂಘ” ಪ್ರಾರಂಭವಾಗಿದೆ.
ಸುದೀಪ್ ಈಗ ಕನ್ನಡದ ನಟ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲೂ ಅವರು ಹೆಸರುವಾಸಿಯಾಗಿದ್ದಾರೆ. “ಈಗ” ಚಿತ್ರದ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಅವರ ಅಭಿನಯಕ್ಕೆ ಆಂಧ್ರದಲ್ಲೂ ಜನ ಕೂಡ ಅವರ ನಟನೆಗೆ ಮನಸೋತಿದ್ದಾರೆ.
ಹಾಗಾಗಿ ಈಗ ಅಲ್ಲೂ “ಸುದೀಪ್‌ರ ಫ್ಯಾನ್ಸ್ ಕ್ಲಬ್” ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಕನ್ನಡದ ಇನ್ನೊಬ್ಬ ನಟ ಪರಭಾಷೆಯಲ್ಲಿ ಗುರುತಿಸಿಕೊಂಡಂತಾಗಿದೆ. ನಟ ದರ್ಶನ್‌ರಿಗೂ ಅಲ್ಲಿ ಫ್ಯಾನ್ಸ್ ಇದ್ದಾರೆ. ಇಲ್ಲಿ ಓದಿ :-ಸುದೀಪ್ ಹೇರ್ ಸ್ಟೈಲ್ ಕಾಪಿ ಮಾಡಿದ ಬಾಲಿವುಡ್ ನಟ !!!
ಸುದೀಪ್‌ರ ತೆಲುಗು ಫ್ಯಾನ್ಸ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಅದರಲ್ಲಿ ಸುದೀಪ್‌ರ ಫೋಟೋಗಳು ರಾರಾಜಿಸುತ್ತಿವೆ.
ಟ್ವಿಟ್ಟರ್‌ನಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಇನ್ನೊಂದು ವಿಶೇಷ. ತಮಗೆ ಟ್ವೀಟ್ ಮಾಡುವ ಎಲ್ಲರಿಗೂ ಸುದೀಪ್ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇವರನ್ನು ಹೊರತು ಪಡಿಸಿದರೆ ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಸ್ಟಾರ್ ನಟರಾರಯರೂ ಸಾಮಾಜಿಕ ಜಾಲ ತಾಣವನ್ನು ಅಷ್ಟಾಗಿ ಬಳಸುತ್ತಿಲ್ಲ.