ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ.
ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ.
ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ ಪಕ್ಷ ಟೀಕಿಸುತ್ತಾನೆ. ನಮ್ಮ ಕಾರ್ಯಕರ್ತರು ಸುಮ್ಮನೆ ಇರೋದು ನನಗೆ ತೊಂದರೆ ಆಗ್ತದೆ ಅಂತ. ನನಗೋಸ್ಕರ ಕಾರ್ಯಕರ್ತರು ಬಾಯಿ ಮುಚ್ಕೊಂಡು ಇದ್ದಾರೆ ಎಂದು ಹೇಳಿದ್ದಾರೆ.
ನಾನು ನಿರ್ಮಾಪಕನೇ, ಇಂಥವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಿರ್ಮಾಪಕರು ಇದ್ದರೇನೆ ಇವರೆಲ್ಲ ಬದುಕುವುದು. ಸಿನಿಮಾದಲ್ಲಿ ಬರೋದೆಲ್ಲ ನಿಜವಲ್ಲ, ಸಿನಿಮಾದಲ್ಲಿ ಬರೋದು ನಂಬಬೇಡಿ. ಅವನ್ಯಾವನೋ ಯಶ್ ಅಂತೆ. ಅವನಿಗೆ ಇನ್ನೂ ಗೊತ್ತಿಲ್ಲ. ನಮ್ಮಂತಹ ನಿರ್ಮಾಪಕರಿದ್ದರೆ ಇವರೆಲ್ಲ ಬದುಕುವುದು ಎಂದು ಹೇಳಿದ್ದಾರೆ.
ಪರದೆ ಮೇಲೆ ನೋಡಿದ್ದನ್ನೆಲ್ಲ ಸತ್ಯವೆಂದು ನಂಬಬೇಡಿ, ನಿಮ್ಮ ಜೀವನವೇ ಸತ್ಯ ನಿಜವಾದ ಸತ್ಯ. ಯಶ್ ನಮ್ಮ ಪಕ್ಷವನ್ನೇ ಕಳ್ಳರ ಪಕ್ಷ ಅಂತಾನೇ. ನಮ್ಮ ಕಾರ್ಯಕರ್ತರು ಕುಮಾರಣ್ಣನಿಗೆ ತೋಂದರೆಯಾದೀತೆಂದು ಬಾಯಿಮುಚ್ಚಿಕೊಂಡು ಇದ್ದಾರೆ ಎಂದು ತಿಳಿಸಿದ್ದಾರೆ.