ಅವಧಿ ಮುಗಿದು ತಿಂಗಳು ಕಳೆದ ಗ್ಲೂಕೋಸ್ ಬಾಟೆಲ್ ಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ರೋಗಿಗಳ ಜೀವದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಮೂಡಲಪಾಳ್ಯ ಗ್ರಾಮದ ವೆಂಕಟಮ್ಮ ಎಂಬ ವಯೋವೃದ್ದೆ, ವಿಪರೀತ ಸುಸ್ತು ಕಂಡ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆಯಲ್ಲಿಅವಧಿ ಮೀರಿದ ಗ್ಲೂಕೋಸ್ ಬಾಟೆಲ್ ಗಳನ್ನು ಇಲ್ಲಿನ ನಸ್೯ಗಳು ನೀಡಿದ್ದಾರೆ.
ಇನ್ನೂ ಈ ಸಮಸ್ಯೆಯನ್ನು ಪ್ರಶ್ನಿಸಿದರೇ ಅವಧಿ ಮುಗಿದು ಮೂರು ತಿಂಗಳುವರೆಗೂ ಗ್ಲುಕೋಸ್ ನೀಡಬಹುದು ಎಂದು ಉಡಾಫೆ ಉತ್ತರವನ್ನು ಇಲ್ಲಿನ ಸಿಬ್ಬಂದಿ ನೀಡಿದ್ದಾರೆ. ಇನ್ನೂ ಇಡೀ ಆಸ್ಪತ್ರೆ ಕರ್ಮಕಾಂಡಕ್ಕೆ ನೆಲಮಂಗಲ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ನರಸಿಂಹಯ್ಯ ನಿರ್ಲಕ್ಷ ಆರೋಪ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ನಾವು ಬರೆದು ಕೊಡುವುದಷ್ಟೆ ನಮ್ಮ ಕೆಲಸ ಎಂದ ಡ್ಯೂಟಿ ಡಾಕ್ಟರ್ಸ್ ಹೇಳತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ, ಒಟ್ನಲ್ಲಿ ಸರ್ಕಾರಿ ಆಸ್ಪತ್ರೆಯ ನರ್ಸ್ ಗಳ ಬೇಜವಾಬ್ಧಾರಿ ಕೆಲಸಕ್ಕೆ ರೋಗಿಗಳು ಪರದಾಟ ನರಳಾಟ ನಡೆಸುವಂತಾಗಿದೆ, ರೋಗಿಗಳ ಜೀವದ ಜೊತೆ ವೈದ್ಯರ ಚಲ್ಲಾಟಕ್ಕೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರು ಮತ್ತು ರೋಗಿಗಳ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.