ಪ್ರತಿದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ. ಅರಿಶಿನ ಬೆರೆಸಿದ ಹಾಲನ್ನು ಸಾಂಪ್ರದಾಯಿಕ ಮನೆ ಮದ್ದಾಗಿ ಬಳಸಲಾಗುತ್ತದೆ.
ಶೀತ ಮತ್ತು ಕೆಮ್ಮು : ಅರಿಶಿನದಲ್ಲಿರುವ ನಂಜು ನಿರೋಧಕ ಮತ್ತು ಸಂಕೋಚಕ ಗುಣಗಳು ಹಾಲಿನ ಹಿತವಾದ ಪರಿಣಾಮದೊಂದಿಗೆ ಬೆರೆತು ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತವೆ. ಆ್ಯಂಟಿವೈರಲ್ ಮತ್ತು ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳಿರೋದ್ರಿಂದ ಇದು ಶೀತ ಮತ್ತು ಕೆಮ್ಮಿಗೆ ಅತ್ಯಂತ ಪರಿಣಾಮಕಾರಿ ಔಷಧ.
ಸಂಧಿವಾತ : ಅರಿಶಿನ ಬೆರೆಸಿದ ಹಾಲು ಸಂಧಿವಾತವನ್ನು ಗುಣಪಡಿಸುತ್ತದೆ, ಸ್ನಾಯುಗಳಲ್ಲಿ ಊತವಿದ್ದರೆ ಅದನ್ನು ಕಡಿಮೆ ಮಾಡುತ್ತದೆ.
ಸ್ನಾಯು ಮತ್ತು ಕೀಲುಗಳ ನೋವನ್ನು ಕಡಿಮೆ ಮಾಡುವುದರಿಂದ ಅವು ಇನ್ನಷ್ಟು ಫ್ಲೆಕ್ಸಿಬಲ್ ಆಗುತ್ತವೆ.
ನೋವು : ಆ್ಯಂಟಿಒಕ್ಸಿಡೆಂಟ್ ಗುಣವಿರುವುದರಿಂದ ಅರಿಶಿನ ಬೆರೆಸಿದ ಹಾಲು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಬೆನ್ನು ಮೂಳೆ ಹಾಗೂ ದೇಹದ ಕೀಲುಗಳಿಗೆ ಬಲ ತುಂಬುತ್ತದೆ.
ಯಕೃತ್ತನ್ನು ಡಿಟೊಕ್ಸ್ ಮಾಡುತ್ತದೆ : ಅರಿಶಿನ ಬೆರೆಸಿದ ಹಾಲು ನೈಸರ್ಗಿಕ ಲಿವರ್ ಡಿಟೊಕ್ಸಿಫೈಯರ್, ಜೊತೆಗೆ ರಕ್ತವನ್ನು ಕೂಡ ಶುದ್ಧ ಮಾಡುತ್ತದೆ. ಹಾಗಾಗಿ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಯಕೃತ್ತು ಮತ್ತು ದುಗ್ಧನಾಳ ವ್ಯವಸ್ಥೆಯನ್ನು ಶುದ್ಧವಾಗಿಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ : ಅರಿಶಿನ ಬೆರೆಸಿದ ಹಾಲು ಕುಡಿದ್ರೆ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಅಲ್ಸರ್, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಯಿಂದ ದೂರವಿರಬಹುದು.
ಅರಿಶಿನ ಪ್ರಬಲ ನಂಜುನಿರೋಧಕವಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ, ಹೊಟ್ಟೆ ಹುಣ್ಣಾಗದಂತೆ ನೋಡಿಕೊಳ್ಳುತ್ತದೆ.
.