ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು, ಇದೆ ಸಮಯದಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಮ್ಮ ಈ ICBM ಕ್ಷಿಪಣಿ ಇಡೀ ಅಮೆರಿಕವನ್ನು ಧ್ವಂಸ ಮಾಡಬಲ್ಲದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಕೊರಿಯಾದ ಐಸಿಬಿಎಂ ಅಸ್ತ್ರವು ಅಗಾಧ ಸಾಮರ್ಥ್ಯ ಹೊಂದಿದ್ದು, ಲಾಸ್ ಏಂಜಲಿಸ್ ಮತ್ತು ಚಿಕಾಗೋ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳನ್ನು ಒಂದೇ ಬಾರಿಗೆ ನುಚ್ಚುನೂರು ಮಾಡಬಲ್ಲದು ಎಂದು ಕಿಮ್ ಜಾಂಗ್ ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
ಆಕ್ರೋಶ ವ್ಯಕ್ತ ಪಡಿಸಿದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್:- ಈ ಕ್ಷಿಪಣಿ ಪ್ರಯೋಗವು ಉತ್ತರ ಕೊರಿಯಾದ ಅತ್ಯಂತ ಅಪಾಯಕಾರಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,
ಅಮೇರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಆಕ್ಷೇಪವಿದ್ದರೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಮತ್ತೆ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು ಅಮೆರಿಕ ಅಧ್ಯಕ್ಷ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದು , ಹಾಗಾಗಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.