ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ದೆಹಲಿಯಿಂದ ರಾಜಕೀಯ ಘಟಾನುಘಟಿಗಳು ನ ಮುಂದು ತಾ ಮುಂದು ಎಂಬಂತೆ ಆಗಮಿಸುತ್ತಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಯನ್ನು ತಮ್ಮ ಸ್ವ ಪ್ರತಿಷ್ಠೆಯೆಂದು ತೆಗೆದುಕೊಂಡಿರುವ ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗು ಬಿಜೆಪಿ ಪಕ್ಷದ ಮಾಸ್ಟರ್ ಮೈಂಡ್ ಕರ್ನಾಟಕ ರಾಜ್ಯದ ಚುನಾವಣೆಯ ಬಗ್ಗೆ ಸಕತ್ ಪ್ಲಾನ್ ಮಾಡುತಿದ್ದರೆ. ಇನ್ನು ಈ ಹಿನ್ನೆಲೆಯಲ್ಲಿ ಅಮಿತ್ ಶಾ ರವರು ಸಿ ಎಂ ಸಿದ್ದರಾಮಯ್ಯ ರವರಿಗೆ ಠಕ್ಕರ್ ನೀಡಲು ಸಕತ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಅಮಿತ್ ಶಾ ರವರು ಸಿ ಎಂ ಸಿದ್ದು ವಿರುದ್ಧ ಮಾಡಿರುವ ಪಾನ್ ಯಾವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..! ಸಿಎಂ ಸಿದ್ದರಾಮಯ್ಯಗೆ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ತವರಿನಲ್ಲೇ ಸೋಲುಣಿಸಿ ಮರ್ಮಾಘಾತ ನೀಡಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ.
ಇನ್ನು ಇದಕ್ಕಾಗಿ ಸ್ವತಃ ಅಮಿತ್ ಶಾ ಈಗಾಗಲೇ ಸಕತ್ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶದ ಸಂಸದ ರಾಜೇಂದ್ರ ಅವರನ್ನು ಮೈಸೂರಿಗೆ ಕಳುಹಿಸಿದ್ದಾರೆ. ಸಂಸದ ರಾಜೇಂದ್ರ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಿಶೇಷವಾಗಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬಿಜೆಪಿ ಪಾರ್ಟಿ ಮೀಟಿಂಗ್ ನಲ್ಲಿ ಮಾತನಾಡಿರುವ ವಕ್ತರಾ ರಾಜೇಶ್ ರವರು, ಇಲ್ಲಿ ನಮ್ಮ ಪಕ್ಷದ ಪರಿಸ್ಥಿತಿ ಸೂಕ್ಷ್ಮವಾಗಿದೆ ಎಂದು ನಮಗೆ ಗೊತ್ತು. ಹಾಗಿದ್ದರೂ ಪರಿಸ್ಥಿತಿ ಸುಧಾರಿಸುವ ವಿಶ್ವಾಸ ನಮ್ಮದು ಎಂದು ರಾಜೇಂದ್ರ ಹೇಳಿಕೊಂಡಿದ್ದಾರೆ ಇಂದು ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ.
ಆದರೆ ಇತ್ತ ಮೈಸೂರಿನ ಜನತೆ ಮಾತ್ರ ಯಾರು ಎಷ್ಟೇ ಪ್ರಯತ್ನ ಪಟ್ಟರು ಮೈಸೂರು ಹುಲಿ ಸಿದ್ದರಾಮಯ್ಯ ರವರ ವಿರುದ್ಧ ಬಿಜೆಪಿ ಎಷ್ಟೇ ಪ್ಲಾನ್ ಮಾಡಿದರು ಅದು ಅಸಾಧ್ಯ ಎಂಬ ಮಾತನ್ನು ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ಸಿ ಎಂ ತವರು ಕ್ಷೇತ್ರದಲ್ಲಿ ಅವರಿಗೆ ಚುನಾವಣೆ ಮೂಲಕ ಬಿಜೆಪಿ ಪೆಟ್ಟು ಕೊಡುವುದು ಬಹಳ ಹಾಸ್ಯಾಸ್ಪದವಾಗಿದೆ ಇದು ಎಂದೆಂದಿಗೂ ಅಸಾಧ್ಯದ ಮಾತು ಎಂಬ ಮಾತನ್ನು ರಾಜಕೀಯ ತಜ್ಞರು ವ್ಯಕ್ತ ಪಡಿಸಿದ್ದಾರೆ.