ಅಭಿಮಾನಿಗಳೇ ಹಾಗೆ ತಮ್ಮ ನೆಚ್ಚನ ನಟನಿಗಾಗಿ ಏನಾದ್ರೂ ಮಾಡಲು ತಯಾರಿರುತ್ತಾರೆ.ತಮ್ಮ ನೆಚ್ಚಿನ ನಟನ ಚಿತ್ರಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಒಂದು ವೇಳೆ ತಮ್ಮ ನೆಚ್ಚಿನ ನಟನನ್ನು ಒಂದು ಬಾರಿ ಭೇಟಿ ಮಾಡಿಬಿಟ್ಟರೆ ಅವರ ಜೀವನ ಸಾರ್ಥಕ ಆದಂತೆ ಅನ್ನುವಷ್ಟು ಮಟ್ಟಿಗೆ ಇಷ್ಟಪಡುವವರಿದ್ದಾರೆ.
ಆದರೆ ಆಂಧ್ರದ ವಿಜಯವಾಡದ ತಮ್ಮ ನೆಚ್ಚಿನ ನಟನ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಇದಕ್ಕೆ ಹುಚ್ಚು ಅಭಿಮಾನ ಅನ್ನಬೇಕೋ, ಅತಿರೇಕದ ಅಭಿಮಾನ ಅನ್ನಬೇಕೋ ಗೊತ್ತಿಲ್ಲ.ತಾವು ಪ್ರೀತಿಸೋ ಆರಾಧಿಸುವ ಸ್ಟಾರ್ ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದರೆ ಪವನ್ ಕಲ್ಯಾಣ್‍ರನ್ನು ಭೇಟಿ ಮಾಡೋಕೆ ಸಾಧ್ಯವಾಗದ ಕಾರಣ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಹುಚ್ಚು ಅಭಿಮಾನಿಯ ಹೆಸರು ಅನಿಲ್ ಕುಮಾರ್ ಎಂದು.ಈತನು ಒಮ್ಮೆಯಾದ್ರೂ ನೆಚ್ಚಿನ ನಟ ಪವನ್ ಕಲ್ಯಾಣ್ ಅವರನ್ನು ನೇರವಾಗಿ ಭೇಟಿ ಆಗಬೇಕೆಂದು ಆಸೆ ಪಟ್ಟಿದ್ದ, ಆದರೆ ಹಲವಾರು ಬಾರಿ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ.
ಇದಕ್ಕೋಸ್ಕರ ನೆಚ್ಚಿನ ನಟ ಪವನ್ ಪವನ್‍ಕಲ್ಯಾಣ್ ರವರನ್ನು ಭೇಟಿ ಮಾಡಲು ಸಾಧ್ಯ ಆಗುವುದಿಲ್ಲವೇ ಎಂದರಿತು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯ ಮಾಡಿಕೊಂಡಿದ್ದಾನೆ. ತನ್ನ ಅಂತಿಮ ಸಂಸ್ಕಾರಕ್ಕೆ ಪವನ್‍ಕಲ್ಯಾಣ್ ಬರಬೇಕೆಂದು ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾನೆ ಎಂದು ಹೇಳಲಾಗಿದೆ.