ವ್ಯಕ್ತಿ ವಿಶೇಷಣ

ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ..!ಅವರ ಬಗ್ಗೆ ತಿಳಿಯಲು ಈ ಲೇಖನ ಓದಿ..

By admin

February 19, 2018

ರೈತ ನಾಯಕ ,ಶಾಸಕ ಕೆ ಎಸ್‌ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್‌ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ.

ರೈತ ಬಂಧು, ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ವತಃ ಕಬಡ್ಡಿಪಟು, ಕುಸ್ತಿ ಪಟುವಾಗಿದ್ದ ಪುಟ್ಟಣ್ಣಯ್ಯ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ ಗೆದ್ದ ತಂಡವನ್ನು ಸನ್ಮಾನಿಸಲು ಪುಟ್ಟಣ್ಣಯ್ಯ ವೇದಿಕೆ ಮೇಲೆ ಆಸೀನರಾಗಿದ್ದರು.

ಅಭಿಮಾನಿಗಳು, ಸ್ಥಳೀಯ ಮುಖಂಡರೊಂದಿಗೆ ಕುಳಿತು ಖುಷಿಯಾಗಿಯೇ ಪಂದ್ಯ ವೀಕ್ಷಿಸಿದ್ದ ಪುಟ್ಟಣ್ಣಯ್ಯರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು.

ಆದ್ರೆ ವಿಧಿ ಅದಾಗಲೇ ಪುಟ್ಟಣ್ಣಯ್ಯ ಬದುಕಿನ ಹೋರಾಟವನ್ನು ಕಿತ್ತುಕೊಂಡು ಬಿಟ್ಟಿತ್ತು. ಬಳಿಕ ಪುಟ್ಟಣ್ಣಯ್ಯ ಮೃತದೇಹವನ್ನು ಹುಟ್ಟೂರು ಕ್ಯಾತನಹಳ್ಳಿಗೆ ರವಾನಿಸಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಮುಗಿಬಿದ್ದರು. ಇನ್ನು ನಟ ದರ್ಶನ್ ರಾತ್ರೋರಾತ್ರಿ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.