ಸಿನಿಮಾ

ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

By admin

June 22, 2017

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ರಾಮು ಫಿಲಂಸ್’ ನಿರ್ಮಿಸುತ್ತಿರುವ ಕಾಮಿಡಿ ಪ್ರಧಾನ ಚಿತ್ರ “ರಾಜ್ ವಿಷ್ಣು”.

 

ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ  ಕೇವಲ ಒಂದೇ ವಾರದಲ್ಲೇ ವೀಕ್ಷಕರ ಸಂಖ್ಯೆ 6 ಲಕ್ಷಕ್ಕೆ ಸಮೀಪಿಸುತ್ತಿದೆ.

ಯೂಟ್ಯೂಬಲ್ಲಿ ದಾಖಲೆ ನಿರ್ಮಿಸುತಿರುವ ಟ್ರೇಲರ್ :-

ಈ ಟ್ರೇಲರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ 2.7 ಲಕ್ಷ ವೀಕ್ಷಣೆಗೊಂಡು ಯೂಟ್ಯೂಬಲ್ಲಿ ದಾಖಲೆ ನಿರ್ಮಿಸಿದೆ. ಟ್ರೇಲರ್ ಬಿಡುಗಡೆಯಾದ ಒಂದೇ ದಿನದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿರೋದರಿಂದ ಸಹಜವಾಗೇ ಚಿತ್ರತಂಡದ ಪ್ರತಿಯೊಬ್ಬರೂ ಸಂತಸಗೊಂಡಿದ್ದಾರೆ. ಮುಂದೆ ಟ್ರೇಲರ್ ನೋಡಿ:-

ತಮಿಳಿನ ‘ರಜನಿ ಮುರುಘನ್’ ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ‘ರಾಜ್ ವಿಷ್ಣು’ ಸಿನಿಮಾವನ್ನು ತಯಾರು ಮಾಡಲಾಗಿದೆ. ಈ ಹಿಂದೆ `ಅಧ್ಯಕ್ಷ’ ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು ‘ರಜನಿ ಮುರುಘನ್’ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಗುತ್ತಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ ‘ರಾಜ್ ವಿಷ್ಣು’ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.

‘ರಾಜ್ ವಿಷ್ಣು’ ಚಿತ್ರದ ತಾರಾಗಣ :-

ಶರಣ್ ಮತ್ತು ಚಿಕ್ಕಣ್ಣ ಪ್ರಮುಖವಾಗಿರುವ ಈ ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ರವಿಶಂಕರ್, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ.

 

ಯೂಟ್ಯೂಬಲ್ಲಿ ದಾಖಲೆ ನಿರ್ಮಿಸುತ್ತಿರುವ ಈ ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸೂಚನೆ ಇದೆ.