ಕನ್ನಡದ ಜಮಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮ ದಿನದಿಂದ ದಿನಕ್ಕೆ ರೋಚಕಗೊಳ್ಳುತ್ತಿದ್ದು ಕೆಲವೇ ದಿನಗಳಲ್ಲಿ ಫೈನಲ್ ತಲುಪಲಿದೆ.18ಜನರ ಪೈಕಿ ಈಗ ಕೇವಲ 7 ಜನ ಉಳಿದಿದ್ದು ಈ ವಾರದ ಎಲಿಮಿನೇಷನ್ ಪ್ರಕ್ರಿಯಗೆ ಎಲ್ಲಾ ಸ್ಪರ್ದಿಗಳು ನಾಮಿನೇಟ ಆಗಿದ್ದರು.
ತಮ್ಮ ಲವ್ ಸ್ಟೋರಿ, ಬ್ರೇಕಪ್ ಕಹಾನಿಯನ್ನ ಜಗಜ್ಜಾಹೀರು ಮಾಡಿ, ಆಗಾಗ ಕಣ್ಣೀರು ಸುರಿಸಿ, ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡ ಸ್ಪರ್ಧಿ ಅನುಪಮಾ ಗೌಡ. ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡ ಅನುಪಮಾ ಗೌಡ ‘ಬಿಗ್ ಬಾಸ್’ ಕಾರ್ಯಕ್ರಮದ ಮೊದಲ ಕ್ಯಾಪ್ಟನ್ ಕೂಡ ಹೌದು, ಇಲ್ಲಿಯವರೆಗೂ ಎರಡು ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಅನುಪಮಾ ಹಲವಾರು ಬಾರಿ ಡೇಂಜರ್ ಝೋನ್ ಗೆ ಬಂದು ವೀಕ್ಷಕರ ಬೆಂಬಲದಿಂದ ಸೇಫ್ ಆಗಿದ್ದರು.
ಆದ್ರೆ ಪ್ರತಿವಾರದಂತೆ ನೆನ್ನೆ ನಡೆದ ಸುದೀಪ್ ರವರ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಯಾರು ಮನೆಗೆ ಹೋಗುತ್ತಾರೆಂಬದು ವೀಕ್ಷಕರಲ್ಲಿ ಚರ್ಚೆಗೀಡಾಗಿತ್ತು.ಆದ್ರೆ ಎಲಿಮಿನೇಷನ್’ನಲ್ಲಿ ಒಂದು ಬಿಗ್ ಟ್ವಿಸ್ಟ್ ಆಗಿದ್ದು ಅಕ್ಕ ದಾರವಾಹಿ ಖ್ಯಾತಿಯ ಸ್ಟ್ರಾಂಗ್ ಸ್ಪರ್ದಿ ಎಂದೇ ಹೇಳುತ್ತಿದ್ದ ಅನುಪಮಾಗೌಡರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ಬಿಗಬಾಸ್ ವೀಕ್ಷಕರು ಆಕ್ರೋಶ..?
ವೀಕ್ಷಕರು ಹೇಳುವ ಪ್ರಕಾರ ಮನೆಯಿಂದ ಹೊರಕ್ಕೆ ಹೋಗುವ ಅರ್ಹತೆ ಹೊಂದಿದ್ದವರು ನಿವೇದಿತಾ ಗೌಡ.ಆದ್ರೆ ಟಾಪ್ 5 ರಲ್ಲಿ ಉಳಿಯುವ ಎಲ್ಲಾ ಅರ್ಹತೆ ಹೊಂದಿದ್ದ ಅನುಪಮಾ ಗೌಡರನ್ನು ಹೊರಗೆ ಕಳುಹಿಸಿ ಮೋಸ ಮಾಡಿದ್ದಾರೆ ಎಂದು ವೀಕ್ಷಕರು ಆಕ್ರೋಶ ವ್ವ್ಯಕ್ತಪಡಿಸಿದ್ದಾರೆ.
ಅನುಪಮಾ ಗೌಡ ಹೋರ ಹೋಗೋದಿಕ್ಕೆ ನಿವೇದಿತಾರವರ ಲೂಸ್ ಸ್ಟೇಟ್ಮೆಂಟ್ ಕಾರಣ ಎಂದು ವೀಕ್ಷಕರು ಹೇಳಿದ್ದಾರೆ,ನಿವೆದಿತಾಗಿಂತ ಮೋರ್ ಡಿಸರ್ವ್ ಇದ್ದದ್ದು ಅನುಪಮಾ ಎಂದು ಹೇಳುತ್ತಿದ್ದಾರೆ.ಈಗ ಯಾರು ಏನೇ ಹೇಳಿದ್ರು ಅನುಪಮಾ ಮನೆಯಿಂದ ಹೊರಗೆ ಹೋಗಿ ಆಗಿದೆ.
ಈ ಲಕ್ಷಣಗಳು ಇರೋ ಹುಡಗನನ್ನು ನಿವೇದಿತಾ ಗೌಡ ಮದುವೆ ಆಗ್ತಾರಂತೆ…ನಿಮ್ಮಲ್ಲಿ ಈ ಲಕ್ಷಣಗಳು ಇವೆಯೇ ಈ ವಿಡಿಯೋ ನೋಡಿ…