ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ.
ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ.
ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ.
ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಖ್ಯಕಾಲುವೆ ಒಡೆಯುವುದನ್ನು ತಪ್ಪಿಸಿಕೊಳ್ಳಲು ನಿರ್ಮಾಣ ಹಂತದಲ್ಲಿರುವ ಕಾಲುವೆಗೆ ನೀರನ್ನು ಹರಿಸಿದ್ದಾರೆ. ಇದರಿಂದ ರೈತ ಬೆಳೆ ಹಾಳಾಗಿದ್ದು, ಅನ್ನದಾತ ಬೀದಿಗೆ ಬರುವಂತಾಗಿದೆ.