ಉಪಯುಕ್ತ ಮಾಹಿತಿ

ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ಬರಲಿದೆ ಎಂದ ವಿಜ್ಞಾನಿಗಳು..!ತಿಳಿಯಲು ಈ ಲೇಖನ ಓದಿ..

By admin

January 22, 2018

ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ನಮ್ಮನ್ನು ಆವರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಮುಂದಿನ 30 ವರ್ಷಗಳಲ್ಲಿ ಭೂಮಿ ಮೇಲೆ ಮಂಜು ಯುಗ ಎಂಬುದು ಬರಲಿದೆ. ಮಂಜಿನ ಯುಗ ಇದು ಇತಿಹಾಸ.

ಥೇಮ್ಸ್ ನದಿ ಸಹ ಕೊನೆಗೆ ಮಂಜುಗಡ್ಡೆಯಂತಾಗುತ್ತದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ನಾರ್ತುಂಬ್ರಿಯಾ ಯೂನಿವರ್ಸಿಟಿಯ ಮ್ಯಾಥ್ಸ್ ಪ್ರೊಫೆಸರ್ ವಾಲೆಂಟೀನಾ ಝಾರ್ಕೋವಾ ಇದೇ ಸಂಗತಿಯನ್ನು ಹೇಳುತ್ತಿದೆ.

ಇದೇ ಸಂಭವಿಸಿದರೆ ಎಲ್ಲವೂ ಸಮಸ್ಯೆಗಳೇ ಆಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. 13 ರಿಂದ 17ನೇ ಶತಮಾನದ ಮಧ್ಯಕಾಲದಲ್ಲಿ ಇಂತಹ ಮಿನಿ ಮಂಜು ಯುಗ ಇತ್ತಂತೆ. ಅಂತಹದ್ದೇ ಇನ್ನು ಕೆಲವು ವರ್ಷಗಳಲ್ಲಿ ಬರಲಿದೆ ಎನ್ನುತ್ತಿದ್ದಾರೆ. 2030 ಬರುವ ವೇಳೆಗೆ ಜಗತ್ತಿನಲ್ಲಿ ಎಲ್ಲ ಕಡೆ ವಿಪರೀತ ಚಳಿ ಇರುತ್ತದೆ ಎನ್ನುತ್ತಿದ್ದಾರೆ.

ಇದುವರೆಗೂ ಗ್ಲೋಬಲ್ ವಾರ್ಮಿಂಗ್ ಮೂಲಕ ಎಷ್ಟು ಅಪಾಯ ನಡೆದಿದೆಯೋ ಅಷ್ಟು ಈ ಮಿನಿ ಐಸ್‌ಏಜ್‍ನಿಂದ ಕಡಿಮೆಯಾಗುತ್ತದೆಂದು ಆಕೆ ಹೇಳಿದ್ದಾರೆ.

ಈಗಾಗಲೆ ಭೂಮಿ ಮೇಲಿನ ಮಂಜು ಕರಗುತ್ತಿದೆ ಎಂದು, ಅದೇ ರೀತಿ ಸೂರ್ಯನ ಕಾರಣದಿಂದ ಸಹ ಭೂಮಿ ಮೇಲೆ ಶೀತ ಹೆಚ್ಚಾಗುತ್ತದೆ ಎಂದು ಆಕೆ ತಿಳಿಸಿದ್ದಾರೆ. 2030 ರಿಂದ 2050ರವರೆಗೂ ಸೂರ್ಯನ ಶಕ್ತಿ ಸ್ವಲ್ಪ ಕಡಿಮೆಯಾಗುತ್ತದೆ. ಹಾಗಾಗಿ ಮಂಜು ಯುಗ ಬರುವ ಸಾಧ್ಯತೆಗಳು ಇವೆ ಎಂದು ತಿಳಿಸಿದ್ದಾರೆ.