ಆರೋಗ್ಯ

ಅತಿ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಆಗುವ ತೊಂದರೆಗಳು ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

By admin

October 21, 2017

ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ.

 

ನಾಲ್ಕು ಜನರೆದುರು ಓಡಾಡುವುದಕ್ಕೂ ಮುಜುಗರವಾಗುವ ರೀತಿಯಲ್ಲಿ ದೇಹದ ವಿಕಾರವಾಗಿ ಬೆಳೆದು ಜಾಹೀರಾತುಗಳಲ್ಲಿ ತೋರಿಸುವ ತರಹೇವಾರಿ ಔಷಧಗಳನ್ನು ಸೇವಿಸಿಯಾದರೂ ದೇಹದ ತೂಕ ಇಳಿಸಿಕೊಳ್ಳಬೇಕೆಂಬ ಇಚ್ಛೆ ಉಂಟಾಗುತ್ತದೆ. ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಯಾವುದೋ ಒಂದು ಔಷಧದಿಂದ ಸಾಧ್ಯವಾಗುವುದಿಲ್ಲ.

ಅದಕ್ಕೆ ಸತತ ಪರಿಶ್ರಮಬೇಕು. ದೇಹವನ್ನು ದಂಡಿಸಬೇಕು, ಅದಕ್ಕೆ ಸಾಕಷ್ಟು ಶ್ರಮ ನೀಡಿ, ವ್ಯಾಯಾಮ ಮಾಡಬೇಕು, ಹಾಗೆಯೇ ತಿನ್ನುವ ಆಹಾರದಲ್ಲೂ ಪಥ್ಯ ಅನುಸರಿಸಬೇಕು. ಇವೆಲ್ಲ ಇದ್ದರೆ ತೂಕ ಕಡಿಮೆಯಾಗುತ್ತದೆ. ಹಾಗಂತ ತಕ್ಷಣವೇ ದೇಹದ ತೂಕ ಇಳಿಸಿಕೊಳ್ಳಬೇಕೆಂದು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ಮಾರಕ ಎಂಬುದು ತಜ್ಞರ ಅಭಿಪ್ರಾಯ.

  ಹೆಚ್ಚು ವ್ಯಾಯಾಮ ಆಗುವ ಅನಾಹುತಗಳು:-

ಪ್ರತಿದಿನವೂ ದೇಹಕ್ಕೆ ವ್ಯಾಯಾಮ ಬೇಕು. ಬೇಕೇ ಬೇಕು. ಅದು ದೇಹದ