ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು ಪ್ರೋತ್ಸಾಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.
ಏನಿದು ಅಟಲ್ ಪಿಂಚಣಿ ಯೋಜನೆ..?
ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಬ್ಯಾಂಕ್ ಗೆ ಕಟ್ಟಿದರೆ.. ನಾವು ಎಷ್ಟು ಹಣ ಕಟ್ಟುತ್ತೇವೆಯೋ ಅದರ ಆಧಾರದ ಮೇಲೆ ನಮಗೆ 60 ವರ್ಷವಾದಮೇಲೆ ಪಿಂಚಣಿ ದೊರೆಯುತ್ತದೆ.. ಅಕಸ್ಮಾತ್ ನಾವು ಸತ್ತರೇ ನಮ್ಮ ಸಂಗಾತಿಗಳಿಗೆ ಪಿಂಚಣಿ ದೊರೆಯುತ್ತದೆ.. ಅಕಸ್ಮಾತ್ ಅವರೂ ಕೂಡ ಸತ್ತರೆ.. ನಾಮಿನಿ ಗಳಿಗೆ ಒಂದಿಷ್ಟು ಲಕ್ಷ ರೂಪಾಯಿಗಳು ಸಿಗುತ್ತದೆ..
ಎಪಿವೈ ಯೋಜನೆ
ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಪಡೆದುಕೊಳ್ಳಬೇಕು. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಕೆ ಮಾಡಬೇಕು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು.
ಎಪಿವೈ ಯೋಜನೆ ಮಾಡಿಸಿಕೊಂಡವರಿಗೆ 60 ವರ್ಷವಾದ ಬಳಿಕ ಮಾಸಿಕ ₨ 1 ಸಾವಿರದಿಂದ ₨ 5 ಸಾವಿರದವರೆಗೆ ಪಿಂಚಣಿ ಸಿಗುತ್ತದೆ.
ಅರ್ಹತೆ
* ಬ್ಯಾಂಕ್ ಖಾತೆ ಹೊಂದಿದ 18 ರಿಂದ 40 ವರ್ಷದವರು ಈ ಯೋಜನೆಗೆ ಸೇರಬಹುದು.
*ಬೇಕಾಗುವುದು ಆಧಾರ್ ಮತ್ತು ಮೊಬೈಲ್ ಸಂಖ್ಯೆ ಮಾತ್ರ. ಆಧಾರ್ ಸಂಖ್ಯೆ ದೊರೆತಿಲ್ಲವಾದರೆ ಮುಂದಿನ ದಿನಗಳಲ್ಲೂ ಅದನ್ನು ನೀಡಬಹುದು.
ಪಿಂಚಣಿ ಪಡೆಯುವದು ಹೇಗೆ..?
*ವ್ಯಕ್ತಿಗೆ 60 ವರ್ಷವಾದ ತಕ್ಷಣ ಎಷ್ಟು ಮಾಸಿಕ ಪಿಂಚಣಿಗೆ ನೋಂದಾಯಿಸಲಾಗಿತ್ತೋ, ಅಷ್ಟು ಪಿಂಚಣಿ ಬರುತ್ತಲೇ ಇರುತ್ತದೆ.
*ಪಿಂಚಣಿ ಯೋಜನೆ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟರೆ, ಆತನ ಪತ್ನಿಗೆ ಪೂರ್ತಿ ಹಣ ಸಂದಾಯವಾಗುತ್ತದೆ. ಪತ್ನಿ ಮೃತಪಟ್ಟರೆ ಪತಿಗೆ ಹಣ ದೊರೆಯುತ್ತದೆ. ಇಬ್ಬರೂ ಮೃತಪಟ್ಟರೆ ನಾಮನಿರ್ದೇಶಕರಿಗೆ ಹಣ ದೊರೆಯುತ್ತದೆ.
*ಈ ಯೋಜನೆಯಂತೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರುವುದು ಸಾಧ್ಯವಿಲ್ಲ. ಆದರೆ ಫಲಾನುಭವಿ ಮೃತಪಟ್ಟರೆ ಅಥವಾ ಕೆಲವೊಂದು ಕಾಯಿಲೆಗಳು ಸಂಭವಿಸಿದರೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರಬಹುದು.
ವ್ಯಕ್ತಿಗೆ 60 ವರ್ಷ ಪೂರ್ಣಗೊಂಡಾಗ ಆತನ ಎಪಿವೈ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನಗದು ಮಾಡಿಕೊಳ್ಳಬಹುದು ಅಥವಾ ಮಾಸಿಕ ಪಿಂಚಣಿ ಪಡೆಯಬಹುದು. ವ್ಯಕ್ತಿಗೆ 40 ವರ್ಷ ಪೂರ್ಣಗೊಂಡಾಗ ಪಿಂಚಣಿ ಯೋಜನೆಯಿಂದ ಹೊರಬರಲು ಬಯಸಿದ್ದೇ ಆದರೆ ಅವರಿಗೆ ಅವರ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನೀಡಲಾಗುತ್ತದೆ. 40 ವರ್ಷ ಮೇಲ್ಪಟ್ಟವರು ಈ ಯೋಜನೆಯಂತೆ ಹಣ ಉಳಿತಾಯ ಮಾಡುತ್ತ ಹೋದರೆ 60 ವರ್ಷದ ಬಳಿಕ ಅವರು ಪಿಂಚಣಿ ಅಥವಾ ಏಕ ಗಂಟಿನ ನಗದು ವಾಪಸ್ ಪಡೆಯಬಹುದು.
ವಯಸ್ಸಿನ ಮಿತಿ
18-40 ವಯಸ್ಸಿನ ಎಲ್ಲಾ ಭಾರತೀಯರು ಈ ಯೋಜನೆ ಸೌಲಭ್ಯ ಪಡೆಯಬಹುದು. ಯೋಜನೆ ಅನ್ವಯ ತಿಂಗಳಿಗೆ 1000 ದಿಂದ 5000 ವರೆಗೆ ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು, ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.
ಇಲ್ಲಿ ಓದಿ:ಬೋರ್’ವೆಲ್ ಕೊರೆಸುವ ರೈತರಿಗೆ, ಸರ್ಕಾರದಿಂದ 2.5ಲಕ್ಷದ ಸಬ್ಸಿಡಿ ಭಾಗ್ಯ…
ಡಿಪಾಸಿಟ್ ಮಾಡುವುದು ಹೇಗೆ..?
ಇನ್ನು, ಕನಿಷ್ಠ 20 ವರ್ಷಗಳ ಡಿಪಾಸಿಟ್ ಅಗತ್ಯ. 18 ವರ್ಷದವರಾಗಿದ್ದರೆ 42 ವರ್ಷಗಳ ಕಾಲ ತಿಂಗಳಿಗೆ 210 ರೂ. ಡಿಪಾಸಿಟ್ ಮಾಡಬೇಕು. 25 ವರ್ಷದವರಾಗಿದ್ದರೆ 35 ವರ್ಷ ಮಾಸಿಕ 376 ರೂ. ಕೊಡಬೇಕಾಗುತ್ತದೆ. 30 ವರ್ಷ ವಯಸ್ಸಿನವರು 30 ವರ್ಷ ಕಾಲ ತಿಂಗಳಿಗೆ 577 ರೂ. ಕಟ್ಟಬೇಕು. 40 ವರ್ಷದವರಾಗಿದ್ದರೆ 20 ವರ್ಷ ಕಾಲ ತಿಂಗಳಿಗೆ 1,454 ರೂ. ಹೂಡಿದರೆ 60ನೇ ವರ್ಷದಿಂದ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಬಹುದು.
ನಿಮ್ಗೆ ಇನ್ನೂ ಏನಾದ್ರೂ ಸಂದೇಹಗಳಿದ್ರೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ…
ಮಾಸಿಕ 1 ಸಾವಿರ ಪಿಂಚಣಿ
60 ವರ್ಷ ವಯಸ್ಸಾದ ಮೇಲೆ ಮಾಸಿಕ 1 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 1 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 1.7 ಲಕ್ಷ ಹಣ ಸಿಗಲಿದೆ..
ಮಾಸಿಕ 2 ಸಾವಿರ ಪಿಂಚಣಿ
60 ವರ್ಷವಾದಮೇಲೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 2 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 3.4 ಲಕ್ಷ ಹಣ ಸಿಗಲಿದೆ..
ಮಾಸಿಕ 3 ಸಾವಿರ ಪಿಂಚಣಿ
60 ವರ್ಷವಾದಮೇಲೆ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 3 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 5.1 ಲಕ್ಷ ಹಣ ಸಿಗಲಿದೆ..
ಮಾಸಿಕ 4 ಸಾವಿರ ಪಿಂಚಣಿ
60 ವರ್ಷವಾದಮೇಲೆ ಮಾಸಿಕ 4 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 4 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 6.8 ಲಕ್ಷ ಹಣ ಸಿಗಲಿದೆ..
ಮಾಸಿಕ 5 ಸಾವಿರ ಪಿಂಚಣಿ
60 ವರ್ಷವಾದಮೇಲೆ ಮಾಸಿಕ 5 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 5 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 8.5 ಲಕ್ಷ ಹಣ ಸಿಗಲಿದೆ..