ದೇಶ-ವಿದೇಶ

ಅಗಸ್ಟ್ 15ರ ನಂತರ ಮೋದಿ ಸರ್ಕಾರದಿಂದ, ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ..!ಏನು ಗೊತ್ತಾ?ಈ ಲೇಖನಿ ಓದಿ…

By admin

August 01, 2017

1000 ಮತ್ತು 500ರೂಗಳ ನೋಟ್ ಬ್ಯಾನ್ ಮಾಡಿ ಕಾಳಧನಿಕರ ಸೊಕ್ಕಡಿಗಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಈಗ ಮತ್ತೊಂದು ಕಾರ್ಯಕ್ಕೆ ಡೆಡ್ ಲೈನ್ ಕೊಟ್ಟಿದೆ.

ಅದೆಂದರೆ ಸರ್ಕಾರದ ಅಧಿಕಾರದಲ್ಲಿದ್ದುಕೊಂಡೆ ಸರಕಾರಕ್ಕೆ ಮೋಸ ಮಾಡಿ ಸರಕಾರದ ಹಣವನ್ನು ಲಪಟಾಯಿಸುವ, ಹಾಗೂ ಲಂಚ ಬಾಕ ಭ್ರಷ್ಟ ಅದಿಕಾರಿಗಳ ವಿರುದ್ದ ಚಾಟಿ ಬೀಸು ರೆಡಿಯಾಗಿದೆ.

ಅಗಸ್ಟ್ 15ರ ನಂತರ ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ!

ಹಾಗಾಗಿ ನರೇಂದ್ರ ಮೋದಿ ಸರಕಾರವು ಇದನ್ನು ಕಾರ್ಯಗತಗೊಳಿಸಲು ಕೇಂದ್ರ ಜಾಗೃತ ಆಯೋಗ ಪ್ರತಿ ಸಚಿವಾಲಯಗಳಿಗೂ ಭ್ರಷ್ಟ ಅಧಿಕಾರಿಗಳ ಕಡತ ಸಿದ್ಧಪಡಿಸುವಂತೆ ಸೂಚಿಸಿದೆ.ಅಗಸ್ಟ್ 15ರ ನಂತರ ಪಟ್ಟಿಯಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಪಟ್ಟಿ ಸಲ್ಲಿಕೆಗೆ ಆಗಸ್ಟ್ 5 ಡೆಡ್ ಲೈನ್…

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಅಧಿಕಾರಿಗಳ ಸೇವಾ ದಾಖಲೆಯ ಆಧಾರದ ಮೇಲೆ ಭ್ರಷ್ಟ ಅಧಿಕಾರಿಗಳ ಕಡತವನ್ನು ರೂಪಿಸಲಿದೆ. ಆಗಸ್ಟ್ 5ರ ಒಳಗಾಗಿ ಅಂತಿಮ ಪಟ್ಟಿ ಸಲ್ಲಿಸುವಂತೆ ವಿವಿಧ ಇಲಾಖೆಗಳಿಗೆ ಮತ್ತು ಅರೆಸೇನಾ ಪಡೆಗಳಿಗೆ ಸಚಿವಾಲಯ ಸೂಚಿಸಿದೆ.

ಭ್ರಷ್ಟ ಅಧಿಕಾರಿಗಳ ಪಟ್ಟಿ ಬಂದ ನಂತರ…

ಭ್ರಷ್ಟ ಅಧಿಕಾರಿಗಳನ್ನು ಆಧರಿಸಿ ಮಾಡಿದ ಪಟ್ಟಿ ಸಿಕ್ಕ ನಂತರ, ಆ ಪಟ್ಟಿಯಲ್ಲಿರುವ ಅಧಿಕಾರಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ಆರ್ಥಿಕವಾಗಿ ಮೋಸ ಆಗಿದೆಯಾ ಇಲ್ಲವಾ,ಅಥವಾ ಅವರಿಂದ ಆರ್ಥಿಕವಾಗಿ ನಷ್ಟ ಆಗಿದ್ದರೆ, ಅದರಿಂದಾದ ನಷ್ಟ ಪರಿಶೀಲಿಸಲಾಗುತ್ತದೆ.

ನಂತರ ಸರಕಾರಕ್ಕೆ ನಷ್ಟ ಎಸಗಿದ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು  ಕೇಂದ್ರೀಯ ತನಿಖಾ ದಳ ಮತ್ತು ಕೇಂದ್ರ ಜಾಗೃತಾ ಆಯೋಗಕ್ಕೆ ಕಳುಹಿಸಲಾಗುತ್ತದೆ. ಈ ಸಂಸ್ಥೆಗಳು ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ.